ವೃತ್ತಿಜೀವನ ಯಶಸ್ಸಿಗೆ ವೃತ್ತಿಪರ ಸಂವಹನ ಕುರಿತ ಕಾರ್ಯಾಗಾರ

0
4

ಮಂಗಳೂರು : ಉರ್ವಾ ಅಶೋಕನಗರದಲ್ಲಿರುವ ಎಸ್‌.ಸಿ‌.ಎಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ನಿರ್ವಹಣಾ ವಿಭಾಗದ ವತಿಯಿಂದ ಫೆಬ್ರವರಿ 26, 2026ರಂದು ವೃತ್ತಿ ಜೀವನ ಯಶಸ್ಸಿಗೆ ಅಗತ್ಯವಾದ ವೃತ್ತಿಪರ ಸಂವಹನ ವಿಷಯದ ಕುರಿತು ಕಾರ್ಯಾಗಾರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಯೆನೆಪೊಯ ಶಾಲೆ, ಜೆಪ್ಪಿನಮೊಗರು, ಮಂಗಳೂರು ಇಲ್ಲಿನ ಇಂಗ್ಲಿಷ್ ಶಿಕ್ಷಕಿ ಭವ್ಯಲತಾ ಟಿ. ಅವರು ನಡೆಸಿಕೊಟ್ಟರು. ವಾಣಿಜ್ಯ ನಿರ್ವಹಣಾ ವಿಭಾಗದ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿದರು.

ವಿದ್ಯಾರ್ಥಿಗಳಿಗೆ ಉದ್ಯೋಗ ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಸಂವಹನ ಕೌಶಲ್ಯಗಳ ಮಹತ್ವವನ್ನು ವಿವರಿಸಲಾಯಿತು. ಮಾತಿನ ಹಾಗೂ ಅಮೌಖಿಕ ಸಂವಹನ, ದೇಹಭಾಷೆ, ಸಂದರ್ಶನ ನೈಪುಣ್ಯ, ಪ್ರಸ್ತುತಿಕರಣ ವಿಧಾನಗಳು ಮತ್ತು ಆತ್ಮವಿಶ್ವಾಸ ವೃದ್ಧಿ ಕುರಿತು ಸಮಗ್ರ ಮಾರ್ಗದರ್ಶನ ನೀಡಲಾಯಿತು.

ಸಂವಾದಾತ್ಮಕ ಚಟುವಟಿಕೆಗಳು ಹಾಗೂ ಗುಂಪು ಚರ್ಚೆಗಳ ಮೂಲಕ ವಿಷಯವನ್ನು ಸ್ಪಷ್ಟವಾಗಿ ವಿವರಿಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಾಣಿಜ್ಯ ನಿರ್ವಹಣಾ ವಿಭಾಗದ ಮುಖ್ಯಸ್ಥರು ತಿಲಕ್ ಗೌಡ, ವಾಣಿಜ್ಯ ವಿಭಾಗದ ಮುಖ್ಯಸ್ಥರು ಗಾಯತ್ರಿ , ವಾಣಿಜ್ಯ ನಿರ್ವಹಣಾ ವಿಭಾಗದ ಉಪನ್ಯಾಸಕಿ ದೀಕ್ಷಿತ ಆರ್ ಉಪಸ್ಥಿತರಿದ್ದರು.

ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here