ಮಳೆ ನೀರು ಸಂಗ್ರಹಣೆ ಹಾಗೂ ಅಂತರ್ಜಲ ಮರುಪೂರಣ ಕುರಿತ ಕಾರ್ಯಾಗಾರ

0
4

ಮೂಡುಬಿದಿರೆ: ವಿಶ್ವ ಜಲ ದಿನದ ಅಂಗವಾಗಿ ಮೂಡುಬಿದಿರೆ ಪುರಸಭೆ ಹಾಗೂ ಸಿಡಿಡಿ ಇಂಡಿಯಾ ಸರ್ಕಾರೇತರ ಸಂಸ್ಥೆಯ ಸಹಭಾಗಿತ್ವದಲ್ಲಿ ಕಟ್ಟಡ ಇಂಜಿನಿಯರಿಂಗ್ ಕ್ಷೇತ್ರದವರಿಗೆ ಮಳೆ ನೀರು ಸಂಗ್ರಹಣೆ ಹಾಗೂ ಅಂತರ್ಜಲ ಮರುಪೂರಣ ಕುರಿತ ಅರ್ಧ ದಿನದ ಕಾರ್ಯಾಗಾರವು ದಿನಾಂಕ 24.03.2026 ರಂದು ಕನ್ನಡಭವನದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಗಣ್ಯರನ್ನು ವೇದಿಕೆಗೆ ಸ್ವಾಗತಿಸಲಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳು: ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀಮತಿ ಇಂದು ಎಂಅವರು ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ನೀಡಿದರು. ಬಳಿಕವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಪ್ರಜ್ವಲನೆ ಮೂಲಕ ಕಾರ್ಯಾಗಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಸಿಡಿಡಿ ಇಂಡಿಯಾ ಪರಿಚಯ: ಸಿಡಿಡಿ ಇಂಡಿಯಾ ಸಂಸ್ಥೆಯ ಸೀನಿಯರ್ ಪ್ರೋಗ್ರಾಮ್ ಇಂಜಿನಿಯರ್ ಶ್ರೀ ಕಣ್ಣನ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಕಿರು ಪರಿಚಯನೀಡಿದರು. ಪ್ರಥಮ ಅಧಿವೇಶನ: ರೋಟರಿ ಚಾರಿಟೇಬಲ್ ಟ್ರಸ್ಟಸ್ಟ್ ಮೂಡುಬಿದಿರೆಯ ಅಧ್ಯಕ್ಷರಾದ ಶ್ರೀ ಪಿ. ಕೆ. ಥಾಮಸ್ ಅವರು ಮೂಡುಬಿದಿರೆಯಲ್ಲಿನ ಮಳೆನೀರು ಸಂಗ್ರಹಣೆಯ ಉತ್ತಮ ಪದ್ಧತಿಗಳ ಕುರಿತು ಪ್ರಸ್ತುತಿ ನೀಡಿ, ಮಳೆ ನೀರಿನ ಸಂರಕ್ಷಣೆ, ಜಲ ಮರುಪೂರಣ ಮತ್ತು ಕೆರೆ ಪುನಶ್ಚತನದ ಮಹತ್ವವನ್ನು ವಿವರಿಸಿದರು. ಮುಖ್ಯಭಾಷಣ: ದಕ್ಷಿಣ ಕನ್ನಡ ನಿರ್ಮಿತ ಕೇಂದ್ರದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲಾವಿಯವರು ಮಳೆ ನೀರು ಸಂಗ್ರಹಣೆ ಹಾಗೂ ಪರಿಸರ ಸ್ನೇಹಿ ನಿರ್ಮಾಣ ಪದ್ಧತಿಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು ಹಾಗೂ ಜಲ ಸಂರಕ್ಷಣೆ ಬಗ್ಗೆ ಅವರು ಪ್ರಸ್ತಾಪಿಸಿದರು ಮತ್ತು ಅನುಷ್ಠಾನದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಧಾನಗಳನ್ನು ಅರ್ಥೈಸಿದರು. ಇದರಲ್ಲಿ ಸಕ್ರಿಯವಾಗಿ ಅಂತಿಮ ಅಧಿವೇಶನ: ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಿರ್ದೇಶಕರು ಹಾಗೂ ಸಹಾಯಕ ನಗರ ಯೋಜನಾಧಿಕಾರಿಗಳಾದ ಶ್ರೀ ಗುರುಪ್ರಸಾದ್‌ಎ, ಬಿ ಅವರು ನಗರಸ್ಥಳೀಯ ಸಂಸ್ಥೆಗಳ ಪಾತ್ರ ಕುರಿತು ಮಾತನಾಡಿದರು. ಕಟ್ಟಡ ಅನುಮತಿ ನೀಡುವ ಸಂದರ್ಭದಲ್ಲೇ ಕಾನೂನಿನ ಪ್ರಾವಧಾನಗಳಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ಅಂತರ್ಜಲ ಮರುಪೂರಣ ವ್ಯವಸ್ಥೆಗಳ ಅಳವಡಿಕೆಗೆ ಆದ್ಯತೆ ನೀಡುವ ಅಗತ್ಯವನ್ನು ಅವರು ವಿವರಿಸಿದರು. ಧನ್ಯವಾದ ಮತ್ತು ಸಮಾರೋಪ: ಸಿಡಿಡಿ ಇಂಡಿಯಾ ಸಂಸ್ಥೆಯ ಪ್ರೋಗ್ರಾಮ್ ಅಸೋಸಿಯೇಟ್ ಶ್ರೀಮತಿ ಅಂಕಿತ ಎಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗಣ್ಯರು, ಇಂಜಿನಿಯರ್‌ಗಳು, ಅಧಿಕಾರಿಗಳು, ಮಾಧ್ಯಮ ಮಿತ್ರರು ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ಪುರಸಭೆಯ ಪರಿಸರ ಅಭಿಯಂತರರಾದ ಶ್ರೀಮತಿ ಶಿಲ್ಪಾ ಎಸ್ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಭಿಪ್ರಾಯ ಅಗತ್ಯ ಸಹಕಾರ ನೀಡಲು ಆಶ್ವಾಸಿಸಿದ ಇಂಜಿನಿಯರ್ ಸಂಘ, ಮೂಡುಬಿದಿರೆಯ ಅಧ್ಯಕ್ಷರಾದ ಶ್ರೀ ಸತೀಶ ಕೆ ಭಂಡಾರಿ ಹಾಗೂ ನೀರನ್ನು ದೇವರ ಪ್ರಸಾದದಂತೆ ಭಾವಿಸಲು ಜನಮಾನಸದಲ್ಲಿ ಅಭಿಪ್ರಾಯ ಮೂಡಲು ಸಲಹೆ ನೀಡಿದ ಮೊಹಮ್ಮದ್ ಇಟ್ಬಾಲ್ ಅವರು ಇಂಜಿನಿಯರ್ ಸಂಘದ ವತಿಯಿಂದ ಮೂಡುಬಿದಿರೆಯ ಎಲ್ಲಾ ಕಟ್ಟಡಗಳಲ್ಲಿ ಮಳೆ ನೀರು ಇಂಗಿಸುವ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಕುರಿತು ಒಮ್ಮತ ಸೂಚಿಸಿದರು. ಕಾರ್ಯಕ್ರಮದಲ್ಲಿ ಸಿಡಿಡಿ ಇಂಡಿಯಾ ಸಂಸ್ಥೆಯ ಇಂಜಿನಿಯರ್ ಸುಮಂತ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಶಶಿರೇಖಾ, ಕಮ್ಯುನಿಟಿಮೊಬಿಲೈಸರ್ ಆಶಾ, ರಾಜೇಶ್ವರಿ, ಚಂದ್ರಿಕಾ, ಅಮಿತಾರವರು ಸಕ್ರಿಯವಾಗಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here