ಬೆಂಗಳೂರು; ರಾಜಾಜಿನಗರದ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜು, ಪಿಜಿಐಎಂಎಸ್ಆರ್ ಮತ್ತು ಮಾದರಿ ಆಸ್ಪತ್ರೆಯಲ್ಲಿ ಇಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ವ್ಯಾಪಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
“ಹೆಚ್.ಐ.ವಿ., ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆ–ತಡೆಗಳನ್ನು ಕೊನೆಗಾಣಿಸೋಣ.” ಎಂಬ ಧ್ಯೇಯವಾಕ್ಯದಡಿ ಜನ ಜಾಗೃತಿ ಮೂಡಿಸಲಾಯಿತು. ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಡೀನ್ ಡಾ. ಜಿತೇಂದ್ರ ಕುಮಾರ್, ಮೆಡಿಕಲ್ ಸೂಪರಿಂಟೆಂಡ್ ಡಾ. ಸಿ.ಜಿ.ಎಸ್. ಪ್ರಸಾದ್, ಹಿರಿಯ ಚರ್ಮರೋಗ ತಜ್ಞರು ಮತ್ತು ಎಚ್ಐವಿ ಐಸಿಟಿಸಿ ವಿಭಾಗದ ಉಸ್ತುವಾರಿ ಡಾ. ಗಿರೀಶ್ ಎಂ.ಎಸ್. ಚರ್ಮರೋಗ ವಿಭಾಗ ವಿಭಾಗಾಧಿಕಾರಿ ಡಾ. ರಘುನಾಥ, ಸಮುದಾಯ ವೈದ್ಯಕೀಯ ವಿಭಾಗ ವಿಭಾಗಾಧಿಕಾರಿ ಡಾ. ಸುರೇಶ್ ಕುಮಾರ್ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ಸೇವೆಗಳಲ್ಲಿನ ಅಡೆತಡೆಗಳನ್ನು ದೂರ ಮಾಡಿ, ಎಲ್ಲರಿಗೂ ಎಚ್.ಐ.ವಿ ಚಿಕಿತ್ಸೆ ಎಲ್ಲರಿಗೂ ಸುಲಭವಾಗಿ ಹಾಗೂ ನಿರಂತರವಾಗಿ ತಲುಪಿಸಲು ಕ್ರಮ ಕೈಗೊಂಡಿರುವ ಕುರಿತು ಮಾಹಿತಿ ನೀಡಿದರು. ಉದ್ಘಾಟನೆಯ ನಂತರ ರೋಗಿಗಳಿಗಾಗಿ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು. ಮೂಲಭೂತವಾಗಿ ಹೆಚ್.ಐ.ವಿ. ಮತ್ತು ಏಡ್ಸ್ ಎಂದರೇನು?, ಹೇಗೆ ಹರಡುತ್ತದೆ ಮತ್ತು ಹೇಗೆ ಹರಡುವುದಿಲ್ಲ, ಸುರಕ್ಷಿತ ಲೈಂಗಿಕ ವರ್ತನೆ ಹಾಗೂ ಕಂಡೋಮ್ ಬಳಕೆಯ ಮಹತ್ವ, ಉಚಿತ ಎಚ್.ಐ.ವಿ ಪರೀಕ್ಷೆ ಮತ್ತು ಎ.ಆರ್.ಟಿ ಚಿಕಿತ್ಸೆಯ ಲಭ್ಯತೆ, ತಾಯಿ–ಮಗು ಹರಡುವಿಕೆ ತಡೆ ಕ್ರಮಗಳು, ಸುರಕ್ಷಿತ ರಕ್ತದಾನ ಮತ್ತು ಶುದ್ಧ ಸಾಧನಗಳ ಬಳಕೆ. ಎಚ್.ಐ.ವಿ ಇರುವವರ ಮೇಲಿನ ಕಳಂಕ ನಿವಾರಣೆ ಮತ್ತು ಸಮಾಜದಲ್ಲಿ ಸಮಾನತೆ ಎಂಬ ಘೋಷವಾಕ್ಯವುಳ್ಳ ಜನಜಾಗೃತಿ ಭಿತ್ತಿಪತ್ರಗಳನ್ನು ಹಂಚಿ ಜನ ಜಾಗೃತಿ ಮೂಡಿಸಲಾಯಿತು.
Home Uncategorized ವಿಶ್ವ ಏಡ್ಸ್ ದಿನಾಚರಣೆ: ಇ.ಎಸ್.ಐ.ಸಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ

