ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವ ಅರಿವಳಿಕಾದಿನ ಎಂದು ಆಚರಿಸಿ ಅರಿವಳಿಕಾ ಶಾಸ್ತ್ರದ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮಾಡಿಸಲಾಗುತ್ತದೆ. 2025ರ ಅರಿವಳಿಕಾ ದಇನದ ಘೋಷವಾಕ್ಯ “ಂಟಿಚಿesಣhesioಟogಥಿ iಟಿ ಊeಚಿಟಣh ಇmeಡಿgeಟಿಛಿies” ಅಂದರೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಅರಿವಳಿಕಾ ಶಾಸ್ತ್ರದ ಮಹತ್ವ ಎಂಬುದಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಗಳಾದ ನೈಸರ್ಗಿಕ ವಿಕೋಪ ಎಂಬುದಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಗಳಾದ ನೈಸರ್ಗಿಕ ವಿಕೋಪಗಳು, ಅಪಾಯಕಾರಿ ಸೋಂಕು ರೋಗಗಳ ಹಾವಳಿಗಳಾದಾಗ ಅಥವಾ ಇನ್ನಾವುದೇ ಮಾನವ ನಿರ್ಮಿತ ವಿಕೋಪಗಳ ಸಂದರ್ಭದಲ್ಲಿ ಜನರ ರಕ್ಷಣೆಯನ್ನು ಮಾಡುವಲ್ಲಿ ಅರಿವಳಿಕಾ ತಜ್ಞರ ಪಾತ್ರದ ಬಗ್ಗೆ ಜನರಲ್ಲಿ ಜಾಗ್ರತೆ ಮೂಡಿಸಲು ವಿಶ್ವದಾದ್ಯಂತ ವಿಶ್ವ ಅರಿವಳಿಕಾ ದಿನ ಆಚರಿಸಲಾಗುತ್ತಿದೆ. 1846ರಲ್ಲಿ ಮೊತ್ತ ಮೊದಲ ಬಾರಿಗೆ ಅಮೆರಿಕಾದ ಬಾಸ್ಟನ್‍ನಗರ ಮೆಸ್ಸಾ ಚ್ಯುಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಅಕ್ಟೋಬರ್ 16ರಂದು ಶಸ್ತ್ರಚಿಕಿತ್ಸೆ ಮಾಡಲು ಅರಿವಳಿಕೆಯನ್ನು ಬಳಸಲಾಯಿತು. ಇಂದಿನ ಎಲ್ಲಾ ಅದ್ಭುತ ವೈದ್ಯಕೀಯ ವಿಜ್ಞಾನದ ಸಾಧನೆಗೆ ಈ ದಿನ ಮುನ್ನುಡಿ ಬರೆಯಲಾಯಿತು. ಮಾನವ ಕುಲದ ಜೀವ ರಕ್ಷಣೆಗಾಗಿ ಅರಿವಳಿಕಾ ತಜ್ಞರು ದಿಟ್ಟ ಹೆಜ್ಜೆ ಇಟ್ಟ ಕ್ರಾಂತಿಕಾರಕ ದಿನ ಎಂದರೂ ತಪ್ಪಾಗಲಾರದು.
ಅನಸ್ತೇಶಿಯಾ ಅಥವಾ ಅರಿವಳಿಕೆ ಎಂದರೆ ನೋವಿಲ್ಲದ ಸ್ಥಿತಿ. ಇಂತಹ ನೋವಿಲ್ಲದ ಸ್ಥಿತಿಗೆ ಮನುಷ್ಯ ತಲುಪಿದ ಬಳಿಕ ಬಹಳ ಸುಲಭವಾಗಿ ಅತ್ಯಂತ ಕ್ಲಿಷ್ಟಕರವಾದ ಸರ್ಜರಿಗಳನ್ನು ನೋವಿಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ, ಸಿಸೇರಿಯನ್, ಸರ್ಜರಿ, ನೋವು ನಿರ್ವಹಣೆ, ಪ್ರಸವ ಸಂಬಂಧ ಅಥವಾ ಇನ್ನಾವುದೇ ಮೇಜರ್ ಸರ್ಜರಿ ಸಂದರ್ಭಗಳಲ್ಲಿ ‘ಅರಿವಳಿಕೆ’ ಬಳಿಕ ಕ್ಲಿಷ್ಟಕರವಾದ ಸರ್ಜರಿಯನ್ನು ಸರಳಗೊಳಿಸಿ ನೋವಿಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ. ತೀವ್ರನಿಗಾ ವಿಭಾಗ ಮತ್ತು ತುರ್ತು ಅಪಘಾತ ವಿಭಾಗಗಳಲ್ಲಿ ಅರಿವಳಿಕೆ ತಜ್ಞರ ಪಾತ್ರ ಬಹಳ ಪ್ರಾಮುಖ್ಯವಾಗಿರುತ್ತದೆ ಮತ್ತು ಅನಿವಾರ್ಯವಾಗಿರುತ್ತದೆ. ಇಂತಹಾ ರೋಗಿಯ ಜೀವ ಉಳಿಸುವ ತುರ್ತು ಸಂದರ್ಭಗಳಲ್ಲಿ ರೋಗಿಗಳ ಪ್ರಾಣವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಅರಿವಳಿಕೆ ತಜ್ಞರ ಮೇಲೆ ಇರುತ್ತದೆ.
ಯಾವಾಗ ಅನಸ್ತೇಶಿಯಾ ಅವಶ್ಯಕತೆ ಇರುತ್ತದೆ?
1) ವಾಹನ ಅಪಘಾತ ಅಥವಾ ದೇಹಕ್ಕೆ ಗಾಯ ಉಂಟು ಮಾಡುವ ಯಾವುದೇ ರೀತಿಯ ಅವಘಡಗಳ ಸಂದರ್ಭದಲ್ಲಿ
2) ವಿಷಸೇವನೆ, ಹಾವುಕಡಿತ, ಪ್ರಾಣ ಗಳಿಂದ ದಾಳಿಗೊಳಗಾದಾಗ
3) ಶ್ವಾಸಕೋಶದ ತೊಂದರೆ, ಉಸಿರಾಟದ ಸಮಸ್ಯೆಗಳು ಇದ್ದಾಗ
4) ಮೆದುಳಿನ ಅಘಾತ, ಹ್ರದಯಾಘಾತ ಉಂಟಾದಾಗ
ಈ ಮೇಲೆ ತಿಳಿಸಿದ ಸಂದರ್ಭಗಳಲ್ಲಿ ತಕ್ಷಣದ ವೈದ್ಯಕೀಯ ನೆರವು ಬೇಕಾಗುವಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಾಗಿರುತ್ತದೆ. ಈ ಸಂದರ್ಭಗಳಲ್ಲಿ ಅರಿವಳಿಕಾ ತಜ್ಞರು ತಮ್ಮ ಕೌಶಲ್ಯವನ್ನು ಬಳಸಿ, ರೋಗಿಗಳ ಪ್ರಾಣ ಉಳಿಸುತ್ತಾರೆ.
ಹೇಗೆ ಅರಿವಳಿಕಾ ತಜ್ಞರು ಜೀವ ಉಳಿಸುತ್ತಾರೆ?
ವಾಯುಮಾರ್ಗ, ಗಾಳಿ ಕೊಳವೆ ನಿರ್ವಹಣೆ: ಅಪಘಾತವಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಾಳಿಕೊಳವೆ ಮುಚ್ಚಿ ಹೋಗಿ, ಸರಾಗ ಉಸಿರಾಟಕ್ಕೆ ತೊಂದರೆ ಉಂಟಾದಾಗ ರೋಗಿಯ ಜೀವ ಉಳಿಸಲು ತಕ್ಷಣವೇ ರೋಗಿಯ ಬಾಯಿ ಅಥವಾ ಮೂಗಿನ ಮುಖಾಂತರ ಕೃತಕ ಗಾಳಿ ಕೊಳವೆ, ಗಂಟಲಿನ ಮುಖಾಂತರ ಹಾಕಿ ಸರಾಗ ಉಸಿರಾಟ ಮತ್ತು ಕ್ರತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತದೆ.
ತೀವ್ರನಿಗಾ ಘಟಕ ನಿರ್ವಹಣೆ: ಗಂಭೀರವಾದ ಖಾಯಿಲೆಗಳಿಗೆ ಒಳಗಾಗಿ ರೋಗಿ ಜೀವನ್ಮರಣದ ಸ್ಥಿತಿಯಲ್ಲಿರುವಾಗ ಕ್ರತಕ ಉಸಿರಾಟ ನೀಡಲು ಮತ್ತು ರೋಗಿಯ ರೋಗದ ಪರಿಸ್ಥಿತಿಯನ್ನು ನಿಯಂತ್ರಸಲು ಅರಿವಳಿಕಾತಜ್ಞರ ಅಗತ್ಯ ಇರುತ್ತದೆ.
ನೋವು ಶಮನ ಮಾಡಲು: ಗಂಭೀರವಾದ ಗಾಯಗಳು, ಸುಟ್ಟ ಗಾಯಗಳು ಮತ್ತು ಅಪಘಾತದ ಕಾರ್ಯಗಳಲ್ಲಿ ರೋಗಿಯ ನೋವು ಶಮನ ಮಾಡಲು ಅರಿವಳಿಕಾ ತಜ್ಞರು ಅತೀ ಅಗತ್ಯ.
ರೋಗಿಯ ರೋಗ ನಿರ್ವಹಣೆ: ರೋಗಿಯ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದಾಗ ರೋಗಿಯ ಹ್ರದಯದ ಬಡಿತ, ರಕ್ತದೊತ್ತಡ, ಅಮ್ಲಜನಕದ ಮಟ್ಟ ಮುಂತಾದವುಗಳನ್ನು ನಿರಂತರವಾಗಿ ನಿಯಂತ್ರಿಸಿ ಹತೋಟಿಯಲ್ಲಿಡಲು ಅರಿವಳಿಕಾ ತಜ್ಞರ ಅಗತ್ಯ ಇರುತ್ತದೆ.
ಅರಿವಳಿಕೆಯನ್ನು ಕಂಡುಹಿಡಿದವರು ಯಾರು?
ವಿಲಿಯಮ್ ಟಿ.ಜೆ.ಮಾರ್ಟಿನ್ ಎಂಬ ದಂತವೈದ್ಯ ದಂತಚಿಕಿತ್ಸೆಗಾಗಿ ‘ಈಥರ್’ ಎಂಬ ಗ್ಯಾಸನ್ನು ಮೂಗಿನ ಮುಖಾಂತರ ಒಳಗೆಳೆದುಕೊಂಡುವಂತೆ ಮಾಡಿ ರೋಗಿಗೆ ನೋವುರಹಿತ ಚಿಕಿತ್ಸೆ ಮಾಡಿದರು. ಮುಂದೆ ಇದೇ ಬಳಕೆಯನ್ನು ಮುಂದುವರಿಸಿ, ಕ್ಲಿಷ್ಟಕರವಾದ ಸರ್ಜರಿ ಮಾಡಲು ಮುನ್ನುಡಿ ಬರೆಯಲಾಯಿತು. ಸುರಕ್ಷಿತವಾಗಿ ಹಿತಮಿತವಾಗಿ ಈ ಗ್ಯಾಸನ್ನು ಬಳಸುವುದರಿಂದ ರೋಗಿಗೆ ನೋವುರಹಿತ ಚಿಕಿತ್ಸೆ ಮಾಡಲು ಸಾಧ್ಯ ಎಂದು ಈ ಸಂಶೋಧನೆಯಿಂದ ಅಕ್ಟೋಬರ್ 16, 1846ರಲ್ಲಿ ಸಾಬೀತಾಯಿತು. ಅನಂತರದ ದಿನಗಳಲ್ಲಿ ಓಪಿಯಮ್ ಮತ್ತು ಇತರ ಹರ್ಬಲ್ ಗಿಡಮೂಲಿಕೆ ಬಳಸಿ ನೋವುರಹಿತ ಸರ್ಜರಿ ಮಾಡಲು ಆರಂಭಿಸಲಾಯಿತು. ಹಾರ್ಸ್‍ಮೇಲ್ಸ್ ಎಂಬ ಇನ್ನೋರ್ವ ದಂತವೈದ್ಯ ನೈಟ್ರಸ್ ಆಕ್ಸೈಡ್ ಎಂಬ ಅರಿವಳಿಕಾ ದ್ರವ್ಯ ಬಳಸುವುದನ್ನು ಜಗತ್ತಿಗೆ ತೋರಿಸಿಕೊಟ್ಟು, ಅರಿವಳಿಕಾ ಶಾಸ್ತ್ರಕಕೆ ಇನ್ನೊಂದು ಮೈಲಿಗಲ್ಲು ಸಾಧಿಸಿ ತೋರಿಸಿದರು.
ಕೊನೆಮಾತು : ಅನಸ್ತೇಷಿಯಾ ಎಂಬ ಶಬ್ದ ಗ್ರೀಕ್ ಮೂಲದಿಂದ ಬಂದಿರುತ್ತದೆ. ಆನ್ (ಚಿಟಿ) ಎಂದರೆ ಹೊರತಾಗಿ ಚಿisಣhesis ಎಂದರೆ seಟಿsಚಿಣioಟಿ ಅಥವಾ ಅರಿಕೆ ಎಂಬುದಾಗಿದೆ. 19ನೇ ಶತಮಾನದಲ್ಲಿ ಈಥರ್, ನೈಟ್ರಸ್ ಆಕ್ಸೈಡ್ ಮತ್ತು ಕ್ಲೋರೋಫಾರ್ಮ್ ಬಳಕೆಯಿಂದ ನೋವುರಹಿತ ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ಸಾಬೀತಾಯಿತು. ನಂತರ 20ನೇ ಶತಮಾನದಲ್ಲಿ ಹೊಸ ಹೊಸ ಔಷಧಿಗಳು ಹುಟ್ಟಿಕೊಂಡು, ಈಗ ಅನಸ್ತೇಷಿಯಾಲಜಿ ಅಥವಾ ಅರಿವಳಿಕಾಶಾಸ್ತ್ರ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿತ್ತದೆ ಎಂದು ಮಗದೊಮ್ಮೆ ಸಾಬೀತಾಗಿದೆ. ಅತ್ಯಂತ ಕ್ಲಿಷ್ಟಕರವಾದ ತೆರೆದ ಹ್ರದಯದ ಶಸ್ತ್ರ ಚಿಕಿತ್ಸೆಯನ್ನೂ ನೋವು ರಹಿತವಾಗಿ ಮಾಡಲು ಸಾಧ್ಯವೆಂದು ಅರಿವಳಿಕಾ ತಜ್ಞರು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಿವಳಿಕಾ ಶಾಸ್ತ್ರ ಮನುಕುಲದ ಎಲ್ಲರ ಒಳಿತಿಗಾಗಿ ಪೂರಕವಾಗಿ ಕೆಲಸ ಮಾಡಲಿ ಎಂದು ತುಂಬು ಹ್ರದಯದಿಂದ ಹಾರೈಸೋಣ