ಬೆಂಗಳೂರು : ವಿಜಯನಗರದಲ್ಲಿರುವ ವಿ.ಸಿ.ಎನ್ ಡಾಕ್ಟರ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ.) ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 12ರಂದು ಬೆಳಿಗ್ಗೆ 7 ಗಂಟೆಗೆ ವಾಕ್‌ಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಸಚಿವರಾದ ಡಾ. ವಿ. ಸೋಮಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಅಲಮ್ಮ ಸೇರಿದಂತೆ ಹಲವಾರು ಗಣ್ಯರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ವಿ.ಸಿ.ಎನ್ ಸಂಸ್ಥೆಯ ಅಧ್ಯಕ್ಷರಾದ ಡಾ. ಭೋಜಮ್ಮ ಎಂ.ಎನ್. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ವಾಕ್‌ಥಾನ್‌ಗೆ ವಿಜಯನಗರದ ಗಾಯತ್ರಿ ಆಸ್ಪತ್ರೆಯಿಂದ ಧ್ವಜಾರೋಹಣಕ್ಕೆ ಚಾಲನೆ ನೀಡಲಾಹಿತು.
ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರ್ವಜನಿಕರಲ್ಲಿ ಹರಡುವುದು ಮತ್ತು ಸಮುದಾಯದ ಆರೋಗ್ಯವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವೈದ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಶಂಕರಲಿಂಗಯ್ಯ – ಸ್ಥಾಪಕ ಅಧ್ಯಕ್ಷರು,ಡಾ. ರಾಜು ಎಸ್. – ಮಾಜಿ ಅಧ್ಯಕ್ಷರು ಹಾಗೂ ಸಾಮಾಜಿಕ ಸೇವಾ ಸಮಿತಿಯ ಅಧ್ಯಕ್ಷರು, ವಿ.ಸಿ.ಎನ್,ಡಾ. ಎಚ್.ಆರ್.ಎಸ್. ಮೂರ್ತಿ – ಸ್ಥಾಪಕ ಖಜಾಂಚಿ,ಡಾ. ವೆಂಕಟ್ರಾಮ ಮೈಸೂರು – ಸ್ಥಾಪಕ ಸದಸ್ಯರು,ಡಾ. ಬಿ.ಎಸ್. ಚಂದ್ರಶೇಖರ್ – ಅಧ್ಯಕ್ಷ-ನಿಯುಕ್ತರು ಡಾ. ಆಶಾ ನಾಗರಾಜ್ – ಮಾಜಿ ಉಪಾಧ್ಯಕ್ಷರು ಸೇರಿದಂತೆ ಇತರರು ಉಪಸ್ಥಿತರಿದ್ದರು.

