ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ ಸಮಾರಂಭ – 2026

0
18

ಜ.31 ಹಾಗೂ ಫೆ.1 ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಟಿತ  ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್-ಬೈಲ್ ಇಲ್ಲಿ ಆಯೋಜಿಸಲಾಗಿದೆ.

ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಪ್ರಯುಕ್ತ ನಡೆಯಲಿರುವ ನಾಲ್ಕು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ.

ಮೊದಲನೆಯ ದಿನದಂದು (ದಿ. 31-01-2026) ಸಂಜೆ 5.00-6.00 ಕ್ಕೆ ಮಂಗಳೂರು ಸಾಧನಾ ಬಳಗ ಶ್ರೀ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು “ಭಕ್ತ ಪುರಂದರ” ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಅದೇ ದಿನ ಸಂಜೆ 7.00-8.00 ಕ್ಕೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ  ಜನಪ್ರಿಯ  “ಚಿಕೆ ರಾಬ್” (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.

ಎರಡನೆಯ ದಿನದಂದು (ದಿ. 01-02-2026) ಸಂಜೆ 5.00-6.00 ಕ್ಕೆ ಗೋವಾದ ನಟರಂಗ ಕ್ರಿಯೇಶನ್ಸ್ ತಂಡದವರಿಂದ “ಹೆಡೋನಿಸ್ಟ್” ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ. ಅದೇ ದಿನ 7.00-8.00 ಗಂಟೆಗೆ ನಾಟ್ಯ ನಿಕೇತನ ಕೊಲ್ಯದ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ಇವರ ತಂಡದವರಿಂದ “ಪಾರಿಜಾತ ಫೂಲ್” ಗೀತ ನೃತ್ಯ ನಾಟಕವೂ ಪ್ರದರ್ಶನ ಗೊಳ್ಳ

ಎರಡನೇ ದಿನ ಸಂಜೆ 6.00 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಹಿರಿಯ ಕೊಂಕಣಿ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರು, ಈ ಬಾರಿಯ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪ್ರಶಸ್ತಿ” ಸ್ವೀಕರಿಸಲಿದ್ದಾರೆ. 

ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ  ಇವರು ಈ ವರ್ಷದ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ” ಸ್ವೀಕರಿಸಲಿರುವರು.

ಕಲಾಸಕ್ತ ಕೊಂಕಣಿ ಬಾಂಧವರು ಈ ಎರಡೂ ದಿನಗಳ ಕೊಂಕಣಿ ನಾಟಕ ಮಹೋತ್ಸವದಲ್ಲಿ ಭಾಗವಹಿಸಿ ಕೊಂಕಣಿ ಭಾಷೆ ಹಾಗೂ ರಂಗಕಲೆಯನ್ನು ಪ್ರೊತ್ಸಾಹಿಸಬೇಕಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಶ್ವಸ್ಥ ಮಂಡಳಿಯವರು ವಿನಂತಿಸಿ ಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here