ಭದ್ರಗಿರಿಯಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಶಮ ಪುಣ್ಯತಿಥಿ ಆರಾಧನಾ ಮಹೋತ್ಸವ

0
38

ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸುಧೀಂದ್ರ ಸ್ವಾಮಿಜಿಯವರ 10 ನೇ ಪುಣ್ಯತಿಥಿ ಆರಾಧನೆಯನ್ನು ದಕ್ಷಿಣ ಪಂಡರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಭಜನೆ ಹಾಗೂ ಸಿಂಧು ಕಾಮತ್ ಇವರಿಂದ ಗುರುಗುಣಗಾನ ಮತ್ತು ಪ್ರಭಾಕರ ಭಟ್ ಇವರಿಂದ ಗುರುಸ್ತವನ ನಡೆಯಿತು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಆಡಳಿತ ಮೊಕ್ತೇಸರರಾದ ಭದ್ರಗಿರಿ ಪಾಂಡುರಂಗ ಆಚಾರ್ಯ , ಅರ್ಚಕರಾದ ಸದಾನಂದ ಆಚಾರ್ಯ, ಸೇವಾದಾರರಾದ CA ಗಣೇಶ್ ಕಾಮತ್ ಮತ್ತು ಕುಟುಂಬಸ್ಥರು, ಗೌರವಾಧ್ಯಕ್ಷ ಎನ್ ಮಂಜುನಾಥ ನಾಯಕ್ , ವಿಶ್ವಸ್ತ ಮಂಡಳಿಯ ಸದಸ್ಯರಾದ ಗಿರಿಧರ ರಾವ್, ಸುರೇಶ ಶೆಣೈ‌ ,ಭಾಸ್ಕರ ಶೆಣೈ , ಮಾಧವರಾಯ ಪ್ರಭು , ಯೋಗೀಶ ಪೈ ಮತ್ತಿತರ ಭಕ್ತಾದಿಗಳು ಭಾಗವಹಿಸಿದ್ದರು .

LEAVE A REPLY

Please enter your comment!
Please enter your name here