ಲೇಖಕಿ, ಕವಯತ್ರಿ, ಸಂಘಟಕಿ ಮಂಗಳೂರು, ಕುಲಶೇಖರ ದ ಶ್ರೀಮತಿ ಅನಿತಾ ಶೆಣೈ ಯವರೀಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ “2025

0
286

ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕಾಸರಗೋಡು ಇದರ ಪ್ರತಿಷ್ಠಿತ ರಾಜ್ಯಾ0ತರ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2025.ಮಂಗಳೂರಿನ ಸುಪ್ರಸಿದ್ದ ಕವಯತ್ರಿ, ಲೇಖಕಿ, ಉತ್ತಮ ಸಂಘಟಕಿ ಆಗಿರುವ ಶ್ರೀಮತಿ ಅನಿತಾ ಶೆಣೈ ಇವರಿಗೆ ಲಭಿಸಿದೆ. ಕನ್ನಡ ಭವನ ಪ್ರಶಸ್ತಿ ಆಯ್ಕೆ ಸಮಿತಿಯು ಇವರ ಪ್ರಶಸ್ತಿಯನ್ನು ಘೋಷಿಸಿದೆ.

22.6.2025.ರಂದು ಅನಿತಾ ಶೆಣೈ ಅವರ ನಿವಾಸದಲ್ಲಿ ನಡೆಯಲಿರುವ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಉದ್ಘಾಟನೆ ಗೊಳ್ಳಲಿರುವ “ಮನೆ ಮನೆ -ಕನ್ನಡ ಜಾಗೃತಿ ಅಭಿಯಾನ “ಮತ್ತು ಕವಿಗೋಷ್ಠಿ ಕಾರ್ಯಕ್ರಮ ದಲ್ಲಿ ಕನ್ನಡ ಭವನ ಕೇಂದ್ರ ಸಮಿತಿ ಕೊಡಮಾಡುವ ಈ ಪ್ರಶಸ್ತಿ ಶ್ರಿಮತಿ ಅನಿತಾ ಶೆಣೈ ಯವರೀಗೆ ಸಂಸ್ಥೆಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳು ನೀಡಿ ಗೌರವಿಸಲಿದ್ದಾರೆ. ಪರಿಷತ್ತು ದ. ಕ. ಜಿಲ್ಲಾಧ್ಯಕ್ಷರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಅದ್ಯಕ್ಷತೆಯಲ್ಲಿ ನಡೆಯಲಿದೆ. ಕನ್ನಡ ದುರೀಣರಾದ ಪ್ರದೀಪ್ ಕುಮಾರ್ ಕಲ್ಕೂರ, ಪಿ ವಿ ಪ್ರದೀಪ್ ಕುಮಾರ್, ಸತ್ಯವತಿ ಭಟ್ ಕೊಲಚಪ್ಪು, ರೇಖಾ ಸುದೇಶ್ ರಾವ್, ಉಮೇಶ್ ರಾವ್ ಕುಂಬ್ಳೆ, ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು, ವಸಂತ್ ಕೆರೆಮನೆ, ಅಪೂರ್ವ ಕಾರಂತ್ ಪುತ್ತೂರು, ಮುಂತಾದವರು ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here