ಉಡುಪಿ : ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 75 ನೇ ವಾರ್ಷಿಕೋತ್ಸವ ದ ಸಂದರ್ಭದಲ್ಲಿ ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ವನ್ನು ಉಡುಪಿ ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ, ಅದಿತಿ ಬಿಲ್ಡರ್ಸ್ ಮಾಲಕ ರಂಜನ್ ಕೆ ಬಿಡುಗಡೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು 75 ವರ್ಷ ಗಳ ಇತಿಹಾಸ ಉಳ್ಳ ಯಕ್ಷಗಾನ ಸಂಘ ಗುಂಡಿಬೈಲಿನಲ್ಲಿ ಇರುವುದು ಸ್ಥಳೀಯರಾದ ನಮಗೆ ಹೆಮ್ಮೆ ತರುವ ವಿಚಾರ, ಮಕ್ಕಳಿಗೆ ಯಕ್ಷಗಾನ ಅಭ್ಯಾಸ ಮಾಡಿಸಿ ಅವರಲ್ಲಿ ಸಂಸ್ಕೃತಿ ಮೂಡಿಸುವ ಕೆಲಸ ಶ್ಲಾಘನೀಯ, ಅಮೃತ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ , ಹಮ್ಮಿಕೊಂಡಿರುವ ಎಲ್ಲಾ ಯೋಜನೆಗಳು ಯಶಸ್ವಿc ಯಾಗಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆ ಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಿದ್ದರು, ಸಮಿತಿಯ ಸಂಚಾಲಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಲಾಕ್ಷೇತ್ರ ದ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ, ಯಕ್ಷಗಾನ ವಿಮರ್ಶಕ ಫ್ರೊ ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಕೋಟ್ಯಾನ್, ಕೋಶಾಧಿಕಾರಿ ನರಸಿಂಹ ಎನ್ ಆರ್, ಶ್ರೀಕಲ್ಯಾಣಿ ಉಪಸ್ಥಿತರಿದ್ದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಸುವರ್ಣ ಕನ್ನರ್ಪಾಡಿ ಕಾರ್ಯಕ್ರಮ ನಿರೂಪಿಸಿದರು,

