ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಅಮೃತ ಮಹೋತ್ಸವ ವರ್ಷ ಉದ್ಘಾಟನೆ ಹಾಗೂ 75 ನೇ ಸ್ಥಾಪನಾ ದಿನಾಚರಣೆ ಕಲಾಕ್ಷೇತ್ರ ದ ಸುವರ್ಣ ಮಹೋತ್ಸವ ಸಂಸ್ಥೆಯ ಸಭಾಭವನದಲ್ಲಿ ಜು 20 ರಂದು ಜರಗಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಹಿರಿಯ ಸದಸ್ಯ, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ವಹಿಸಿದ್ದರು.
ಅಮೃತ ಮಹೋತ್ಸವ ವರ್ಷದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಫ್ರೊ ಎಂ ಎಲ್ ಸಾಮಗರು ಕೀರ್ತಿ ಶೇಷ ಶಂಕರನಾರಾಯಣ ಸಾಮಗರ ಕಾಲದಿಂದಲೂ ಕಲಾಕ್ಷೇತ್ರ ದೊಂದಿಗೆ ಸಂಪರ್ಕ ಇರಿಸಿದ್ದೇವೆ, 74 ವರ್ಷ ಸುಧೀರ್ಘ ಕಲಾಸೇವೆ ಮಾಡಿದ ಈ ಸಂಸ್ಥೆ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಯಾಗಿದೆ, ಯಕ್ಷ ಶಿಕ್ಷಣ ವನ್ನು ಅಕಾಡಮಿ ರೀತಿಯಲ್ಲಿ ಬೆಳೆಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪದ್ಧಿತಿಯನ್ನು ಜಾರಿಗೆ ತಂದು ಉತ್ತೀರ್ಣ ರಾದವರಿಗೆ ಸರ್ಟಿಫಿಕೇಟ್ ನೀಡುವಂತೆ ಆಗಬೇಕು ಕಲಿತ ಕಲಾವಿದರಿಗೆ ದೇಶ ವಿದೇಶ ಗಳಲ್ಲಿ ಮನ್ನಣೆ ದೊರಕುವಂತೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಮೃತ ಮಹೋತ್ಸವದ ಲೋಗೋ ಅನಾವರಣ ಮಾಡಿದ ನಿಕಟ ಪೂರ್ವ ಶಾಸಕ ಕೆ ರಘುಪತಿ ಭಟ್ ಮಾತನಾಡಿ ಬಾಲ್ಯ ದಿಂದಲೂ ಕಲಾಕ್ಷೇತ್ರದ ಚಟುವಟಿಕೆ ಗಳನ್ನು ಗಮನಿಸುತ್ತಾ ಬಂದಿದ್ದು 74 ವರ್ಷ ಸುಧೀರ್ಘ ಸೇವೆ ಸಲ್ಲಿಸಿದ ಪದಾಧಿಕಾರಿಗಳ ಪಟ್ಟಿ ಯನ್ನು ಸಂಘದ ಕಚೇರಿಯಲ್ಲಿ ಅಳವಡಿಸಿರುವುದು ಶ್ಲಾಘನೀಯ ಎಂದು ಹೇಳಿದರು, ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕೈಗೊಂಡಿರುವುದು ಸ್ತುತ್ಯಾರ್ಹ ಎಂದರು, ಸಭಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಇವರು ನಿಟ್ಟೂರು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ಆರಂಭವಾದ ಈ ಸಂಘಕ್ಕೆ ದೈವಸ್ಥಾನದ ಶಕ್ತಿ ಗಳ ಪೂರ್ಣ ಅನುಗ್ರಹ ಇದೆ, ದಶಮಾನೋತ್ಸವ, ರಜತ ಸಂಭ್ರಮ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವಗಳನ್ನು ಆಚರಿಸಿದ ಸಂಸ್ಥೆಯ ಉಚ್ಛ್ರಾಯ ಬೆಳವಣಿಗೆಗೆ ಕಾರಣರಾದವರನ್ನು ಸ್ಮರಿಸಿದರು, ಕಲಾಕ್ಷೇತ್ರ ದ ಗೌರವಾಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ, ಅಮೃತ ಮಹೋತ್ಸವ ಸಂಚಾಲಕ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.
ಸಂಘದ ಸದಸ್ಯ ಹವ್ಯಾಸಿ ರಂಗದ ಖ್ಯಾತ ಮದ್ದಲೆ ವಾದಕ ,ಹಾಗೂ ಯಕ್ಷಗುರು ರತ್ನಾಕರ್ ಶೆಣೈ ಶಿವಪುರ ಇವರಿಗೆ ಸನ್ಮಾನ ಮಾಡಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಾತ್ರ್ ಸಂಸ್ಥೆಯಲ್ಲಿ ನೀಡಿದ ಸನ್ಮಾನ ಕಲಾಜೀವನದ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು, ನಿಕಟ ಪೂರ್ವ ಅಧ್ಯಕ್ಷ ಜಿ ಬಾಬು ಗೌಡ ತನ್ನ ಕೊಡುಗೆಯನ್ನು ಸಂಘದ ಅಧ್ಯಕ್ಷರಿಗೆ ವೇದಿಕೆಯಲ್ಲಿ ನೀಡಿದರು. ರಿಯ ಸದಸ್ಯರಾದ ನಿಟ್ಟೂರು ಶೀನಪ್ಪ ಸುವರ್ಣ, ಗೋಪಾಲಕೃಷ್ಣ ಮಲ್ಯ, ಅಣ್ಣಯ್ಯ ಪಾಲನ್, ಜಿ ಶಿವಪಾಲನ್, ದಯಾನಂದ ಭಾಗವ ಉಪಸ್ಥಿತರಿದ್ದರು. ಕೋಶಾಧಿಕಾರಿ ನರಸಿಂಹ ಎನ್ ಆರ್, ಕಲಾಕಾರ್ಯದರ್ಶಿ ಶ್ರೀಧರ್ ಭಟ್ ಸಹಕರಿಸಿದರು,
ಕಲಾಕ್ಷೇತ್ರದ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಸ್ವಾಗತಿಸಿ ಪ್ರಸ್ತಾವನೆಗೈದರು.
ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, ಡಾ. ರಮೇಶ್ ಚಿಂಬಾಲ್ಕರ್ ಧನ್ಯವಾದ ಸಮರ್ಪಣಗೈದರು, ಬಳಿಕ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಜರಗಿತು,
ಸಂಘದ ಸರ್ವ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಕಲಾಭಿಮಾನಿಗಳು ಭಾಗವಹಿಸಿದ್ದರು.