ಯಂತ್ರ ಶ್ರೀ ನಾಟಿ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ

0
63

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಮೂಡಬಿದ್ರೆ ಕೃಷಿ ಕಾರ್ಯಕ್ರಮದಡಿ

ಕಡಂದಲೆ ಪರಾಡಿ ಶ್ರೀಯುತ ಕೆ. ಪಿ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾ ಕೃಷಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ 12 ಎಕ್ರೆ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತ ದ ಸಸಿ ನಾಟಿಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಶ್ರೀ ಸುಕೇಶ್ ಪೂಜಾರಿ ಭಾಗವಹಿಸಿ ಯಂತ್ರ ಶ್ರೀ ನಾಟಿಯಿಂದ ಇಳುವರಿಯಲ್ಲಿ ಹೆಚ್ಚಳ, ಅಧಿಕ ಹುಲ್ಲು ಹಾಗೂ ಸುಲಭ ನಾಟಿ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷ ಸ್ಥಾನ ವಹಿಸಿದ ಹೊಲದ ಮಾಲಕರು, ಪ್ರಗತಿ ಪರ ಕೃಷಿಕರು ಆದ ಶ್ರೀ ಯುತ ಕೆ ಪಿ ಸಂತೋಷ್ ಕುಮಾರ್ ಶೆಟ್ಟಿ ರವರು ಒಟ್ಟು 40 ಎಕ್ರೆ ಭತ್ತದ ಕೃಷಿ ಮಾಡುತ್ತಿದ್ದು, ವಾರ್ಷಿಕ ಸುಮಾರು 1000 ಕೆಜಿ ಭತ್ತ ಬೆಳೆಯುವುದಾಗಿ ತಿಳಿಸಿದರು. ಇವರ ಈ ವಿಶೇಷ ಸಾಧನೆಯನ್ನು ಗುರುತಿಸಿ 2025ನೇ ಸಾಲಿನ ಜಿಲ್ಲಾ ಕೃಷಿ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತಗೊಂಡಿರುತ್ತಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ರೈತರು, ಸೇವಾಪ್ರತಿನಿಧಿ ಗಳು ಭಾಗವಹಿಸಿದ್ದರು. ಯೋಜನೆಯ ಕೃಷಿ ಮೇಲ್ವಿಚಾರಕರಾದ ಲೋಕೇಶ್ ಪಿ. ಎಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here