ನಾಡದೊರೆ ಸಿದ್ಧರಾಮಯ್ಯರಿಗೆ ಚಿತ್ರ ಹಸ್ತಾಂತರಿಸಿದ ಯಶೋಧ ಆಚಾರ್ಯ ನೀರೆ ಬೈಲೂರು

0
17

ಕಾರ್ಕಳ : ನಾಡ ದೊರೆ ರಾಜ್ಯದ ಮುಖ್ಯಮಂತ್ರಿ ಪಂಚ ಭಾಗ್ಯಗಳ ಸರದಾರ ಸಿದ್ಧರಾಮಯ್ಯ ನವರು ಮತ್ತು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿಯವರ ಪೆನ್ಸಿಲ್ ಚಿತ್ರವನ್ನು ಕಾರ್ಕಳ ತಾಲೂಕಿನ ನೀರೆ ಬೈಲೂರು ಗ್ರಾಮ ಪಂಚಾಯತ್ ಸದಸ್ಯೆ ಚಿತ್ರ ಕಲಾವಿದೆ ಯಶೋಧ ಆಚಾರ್ಯ ನೀರೆ ಬೈಲೂರು ಅವರು ಬಿಡಿಸಿ ಫೆಬ್ರವರಿ 25ರಂದು ಕಾರ್ಕಳದ ಕಿಸಾನ್ ಸಭಾ ಟ್ರಸ್ಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯವರಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಡಾ.ಎಂ.ವೀರಪ್ಪ ಮೊಯಿಲಿಯವರ ಚಿತ್ರವನ್ನು ಬಿಡಿಸಿ ಹಸ್ತಾಂತರಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತನ್ನ ಪೆನ್ಸಿಲ್ ಚಿತ್ರವನ್ನು ಸಂತಸ ವ್ಯಕ್ತಪಡಿಸಿದರು.

ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಇದ್ದರು. ನಾಡದೊರೆಯ ಚಿತ್ರವನ್ನು ಬಿಡಿಸಿ ಹಸ್ತಾಂತರಿಸಿದ ಕ್ಷಣ ನನ್ನ ಜೀವನದ ಅಪೂರ್ವ ಕ್ಷಣ ಎಂದು ಯಶೋಧ ಆಚಾರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here