ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿಮಾರ್ಚ್ತಿಂಗಳ – 2026 ಸಂಜೆಯ [5 ಗಂಟೆಯ] ಯೋಗಶಿಬಿರವನ್ನು ಆಶ್ರಮದಅಧ್ಯಕ್ಷ ಶ್ರೀ ಸ್ವಾಮಿಜಿತಕಾಮಾನಂದಜೀ ಮಹಾರಾಜ್‌ಉದ್ಘಾಟಿಸಿ, ತಮ್ಮ ಆಶೀರ್ವಚನದಲ್ಲಿ ಯೋಗವನ್ನುಅಭ್ಯಾಸ ಮಾಡುವುದರಿಂದದೈಹಿಕ ಮತ್ತು ಮಾನಸಿಕ ಸ್ಥಿತಿಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.ಇದು ಮೂಲತಃದೇಹ ಮತ್ತು ಮನಸ್ಸಿನ ಸ್ವಾಸ್ಥ÷್ಯಕ್ಕೆಕಾರಣವಾಗುವಅಭ್ಯಾಸವಾಗಿದೆ.
ಯೋಗವನ್ನುಅಭ್ಯಾಸ ಮಾಡುವುದರಿಂದದೇಹ,ಆತ್ಮ ಮತ್ತು ಮನಸ್ಸಿನ ನಡುವೆ ಸಮತೋಲನ ಬರುತ್ತದೆ. ಒತ್ತಡ, ದೈಹಿಕದೌಬರ್ಲ್ಯ ಮತ್ತುಇತರ ಹಲವಾರು ಸಮಸ್ಯೆಗಳನ್ನು ಎದುರಿಸಲುಯೋಗ ನಮಗೆ ಸಹಾಯ ಮಾಡುತ್ತದೆ. ಯೋಗದದೈನಂದಿನ ಅಭ್ಯಾಸವುಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಯೋಗವು ಸ್ವಯಂಗುಣಪಡಿಸುವಿಕೆಯನ್ನುಉತ್ತೇಜಿಸುತ್ತದೆ, ವೈಯಕ್ತಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸ್ವಯಂ ಪರಿವನ್ನು ಹೆಚ್ಚಿಸುತ್ತದೆ. ಇಂದಿನ ಸವಾಲಿನ ಕೆಲಸದ ವಾತಾವರಣವು ಕೆಲವೊಮ್ಮೆಖಿನ್ನತೆ, ಕೆಲಸದಕಾರ್ಯಕ್ಷಮತೆಕಡಿಮೆಯಾಗುವುದು.
ನಿತ್ಯಯೋಗದಿಂದ ಕೆಲಸದಒತ್ತಡ ನಿಯಂತ್ರಣಗೊಳ್ಳುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಯೋಗವುಒತ್ತಡವನ್ನುಕಡಿಮೆ ಮಾಡುತ್ತದೆ. ಗಮನವನ್ನು ಸುಧಾರಿಸುತ್ತದೆ. ಮತ್ತು ಶಕ್ತಿಯನ್ನು ಸುಧಾರಿಸುತ್ತದೆ. ಯೋಗವು ಧೀರ್ಘಕಾಲದಆರೋಗ್ಯ ಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆಎಂದು ತಿಳಿಸಿದರು.
ದೇಲಂಪಾಡಿಯೋಗ ಪ್ರತಿಷ್ಠಾನದಂಯೋಗಗುರುಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವದ ಪ್ರಯೋಜನಗಳನ್ನು ತಿಳಿಸಿದರು. ದೇಲಂಪಾಡಿಯವರ ಶಿಷ್ಯರಾದ ಸುಮಾ, ಚಂದ್ರಹಾಸ ಬಾಳ, ಡಾ.ಉಮಾ,ಪ್ರೇಮ ,ಮತ್ತು ಶೆಲಜ ಉಪಸ್ಥಿತರಿದ್ದರು.
ಆಸಕ್ತರು ಯೋಗ ಶಿಬಿರದಲ್ಲಿ ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲಯವನ್ನು ಸಂಪರ್ಕಿಸಬಹುದು. ಸಂಪರ್ಕ: 0824-2414412

