ಶರೀರ-ಆರೋಗ್ಯಸುಸ್ಥಿತಿಗೆ ಯೋಗ ಅಗತ್ಯ: ಶ್ರೀ ಸ್ವಾಮಿಜಿ ತಕಾಮಾನಂದಜೀ ಮಹಾರಾಜ್

0
23

ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ಎರಡು ವಾರಗಳ ಕಾಲ ಜರುಗುವ ಯೋಗ ಶಿಬಿರ ಉದ್ಘಾಟನೆಗೊಂಡಿತು.

ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿಜಿತ ಕಾಮಾನಂದಜೀ ಮಹಾರಾಜ್ ಆಶೀರ್ವಚನ ನೀಡಿ, ಯೋಗವು ಭಾರತದ ಪುರಾತನ ಸಂಪ್ರದಾಯದ ಒಂದು ಅಮೂಲ್ಯ ಕೊಡುಗೆ. ದೇಹ, ಮನಸ್ಸು ಮತ್ತು ಆತ್ಮಗಳ ಸಾಮರಸ್ಯದ ಅವಸ್ಥೆ ದೈಹಿಕ, ಮಾನಸಿಕ ಶಾಂತಿ, ನೆಮ್ಮದಿಗಳ ಅರಿವುಗಳನ್ನು ಪಡೆಯುವುದೇ ನಿಜವಾದ ಆರೋಗ್ಯ.ಇದುದೇಹ ಮತ್ತು ಮನಸ್ಸನ್ನು ಚಿಂತನೆ ಮತ್ತು ಕಾರ್ಯವನ್ನು ನಿರ್ಬಂಧ ಮತ್ತು ಸಫಲತೆಯನ್ನು ಮನುಷ್ಯ ಮತ್ತು ಪ್ರಕೃತಿಯೊಂದಿಗೆ ಹೊಂದಿಕೆಯನ್ನು ಒಟ್ಟಾಗಿರಿಸುವುದನ್ನು ಒಳಗೊಂಡಿರುತ್ತದೆ. ಹಾಗೂ ಶರೀರ ಆರೋಗ್ಯ ಸುಸ್ಥಿತಿಯಲ್ಲಿರಲು ಯೋಗ ಸಹಕಾರ ನೀಡಬಲ್ಲುದು. ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಕಾಪಾಡುವ ಯೋಗಕ್ಕೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವಿದೆ. ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸನ್ನು ರೂಪಿಸಲು, ಜೀವನಕ್ರಮದಲ್ಲಿಯೇ ಮಹತ್ತರ ಪರಿವರ್ತನೆ ತರಲು ಯೋಗಮಾರ್ಗ ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು.
ಶ್ರೀ ದೇಲಂಪಾಡಿಯವರು ಯೋಗದ ಧ್ಯಾನದ ಮಹತ್ವವನ್ನು ತಿಳಿಸಿದರು. ಪತಂಜಲಿ ಋಷಿ ತಿಳಿಸಿದ ಅಷ್ಟಾಂಗ ಯೋಗದ ಏಳನೇಯ ಮಾರ್ಗವೇ ದ್ಯಾನ. ದ್ಯಾನ ಎಂದರೆ ತಲ್ಲಿನತೆ ಸ್ವ ಪರಿಚಯ ಕಲೆ ತನ್ನದೆ ಪ್ರತಿಬಿಂಬ. ತನ್ನ ಆಂತರ್ಯಗಳನ್ನು ಸೂಕ್ಷಮವಾಗಿ ಪರೀಕ್ಷೀಸಿಕೊಳ್ಳುವ ಸಾಧನ. ಧ್ಯಾನಎಂದರೆ ನಿರಂತರವಾದ ಪ್ರಯತ್ನರಹಿತವಾದಒಂದೇ ವಸ್ತುವಿನ ಯಾ ವಿಷಯದಯೋಚನೆಯ ಪ್ರವಾಹವಾಗಿದೆ. ಧ್ಯಾನದಿಂದ ದುಃಖ, ಮನಸ್ಸಿನ ಒತ್ತಡ ನಿವಾರಣೆಯಾಗಿ ಮನಸ್ಸು ಹಗುರ, ಶಾಂತವಾಗಿ ಲವಲವಿಕೆಯಿಂದ ಆನಂದಮಯ ಆಗುವುದು. ಮನೋಬಲ, ಆತ್ಮಬಲ ಹೆಚ್ಚುವುದು ಎಂದು ತಿಳಿಸಿದರು. ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ, ಚಂದ್ರಹಾಸ ಬಾಳ, ತುಕಾರಾಮ್‌ ಹಾಗೂ ಪೇಮ್ ಇವರು‌ ಸಹಕರಿಸಿದರು. ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದಕಾರ್ಯಾಲವನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here