ಮಂಗಳೂರು – ಜನವರಿ ತಿಂಗಳ [2029] ಎರಡು ವಾರಗಳ ಕಾಲ ನಡೆಯುವಯೋಗ ಶಿಬಿರವು ಮಂಗಳಾದೇವಿ ಸಮೀಪ ರಾಮಕೃಷ್ಣ ಮಠದಲ್ಲಿ ಮಠದ ಅಧ್ಯಕ್ಷರಾದ ಜಿತಕಾಮಾನಂದಜೀ ಮಹಾರಾಜ್ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದಅವರುಯೋಗವುತನ್ನ ವ್ಯವಸ್ಥಿತ ಹಾಗೂ ಉದ್ದೇಶಿತ (ಸಂಕಲ್ಪಿತ) ಮನಸ್ಸನ್ನು ಶಾಂತಗೊಳಿಸುವ ಪ್ರಕ್ರಿಯೆಗಳಿಂದ ಮನಸ್ಸಿನಲ್ಲಿರುವ ನಿಶ್ಯಕ್ತತೆಗಳನ್ನು ಅಳಿಸಿ ಬಿಡುತ್ತದೆ. ದೃಢವಾದ ಮನೋಬಲವನ್ನು ಅಲ್ಲಿ ಉಂಟು ಮಾಡುತ್ತದೆ. ಅದು ಉಸಿರಾಟವನ್ನು ನಿಧಾನಗೊಳಿಸುತ್ತದೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಸೃಜನ ಶೀಲತ್ವ ಮತ್ತು ಮನೋಬಲವನ್ನು ವೃದ್ಧಿಸುತ್ತದೆ. ಬುದ್ಧಿ ಶಕ್ತಿಯನ್ನು ಹರಿತಗೊಳಿಸುತ್ತದೆ ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. ಇಮೋಷನಲ್ ಲೆವೆಲ್ (ಭಾವನಾತ್ಮಕ ಹಂತ) ಅದು ಜೀವನದಲ್ಲಿ ಸಂತೋಷ (ಆನಂದ)ವನ್ನು ಮತ್ತು ಸ್ಥಿತ ಪ್ರಜ್ಞತೆ ಹೆಚ್ಚಿಸುತ್ತದೆಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇಲಂಪಾಡಿಯೋಗ ಪ್ರತಿಷ್ಠಾನದ ಯೋಗಗುರುಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಮತ್ತು ಮುದ್ರೆಗಳ ಪ್ರಯೋಜನಗಳನ್ನು ತಿಳಿಸಿದರು. ಮಾತನಾಡುತ್ತಾ ನಮ್ಮ ಭಾರತೀಯ ಸಂಸ್ಕೃತಿಯ ಕಲೆಯಾದ ಪತಂಜಲಿ ಋಷಿ ಮಹರ್ಷಿಗಳು ತಿಳಿಸಿದ ಅಷ್ಟಾಂಗ ಯೋಗಗಳನ್ನು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ) ತನ್ನಜೀವನದಲ್ಲಿ ಅಳವಡಿಸಿಕೊಡಾಗ ಜೀವನ ಶೈಲಿಯು ಉತ್ತಮಗೊಳ್ಳುವುದು ಎಂದು ತಿಳಿಸಿದರು. ದೇಲಂಪಾಡಿಯವರ ಶಿಷ್ಯರಾದ ಸುಮಾ, ಚಂದ್ರಹಾಸಬಾಳ,ತುಕರಾಂ, ದಿನೇಶ,ಮನೋಹರ ಮತ್ತು ಪ್ರೇಮ ಸಹಕರಿಸಿದರು.
ಆಸಕ್ತರು ಸಂಜೆ 5.ರಿಂದ ನಡೆಸುವ ರಾಮಕೃಷ್ಣ ಮಠದಯೋಗ ಹಾಲ್ನಲ್ಲಿ ಭಾಗವಹಿಸಲು , ಹೆಸರು ನೊಂದಾಯಿಸಿಕೊಳ್ಳಬಹುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಿರಿ ಎಂದು ತಿಳಿಸಲಾಗಿದೆ.

