ಪರಪ್ಪನ ಅಗ್ರಹಾರ ಜೈಲಿಗೆ ಡ್ರಗ್ಸ್, ಸಿಮ್ ಸಾಗಣೆ : ಯುವತಿ ಬಂಧನ

0
52

ಬೆಂಗಳೂರು : ಸಿಲಿಕಾನ್ ಸಿಟಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ಮಾದಕ ವಸ್ತು ಹಾಗೂ ಸಿಮ್ ಕಾರ್ಡ್ಗಳನ್ನು ಪೂರೈಸಲು ಯತ್ನಿಸುತ್ತಿದ್ದ ಯುವತಿಯೊಬ್ಬಳನ್ನು ಪೊಲೀಸರು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು 27 ವರ್ಷದ ರಿತಿಕಾ ರೈ ಎಂದು ಗುರುತಿಸಲಾಗಿದೆ.

ಮಾರ್ಚ್ 26 ರಂದು ಈಕೆ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಫರಾನ್ ಖಾನ್ ಎಂಬಾತನನ್ನು ಭೇಟಿಯಾಗಲು ಬಂದಿದ್ದಳು. ಜೈಲಿನ ಮುಖ್ಯ ದ್ವಾರದ ಬಳಿ ಈಕೆಯ ನಡವಳಿಕೆ ಕಂಡು ಸಂಶಯಗೊಂಡ ಮಹಿಳಾ ಭದ್ರತಾ ಸಿಬ್ಬಂದಿ ತಕ್ಷಣ ಆಕೆಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.

ಯುವತಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಜೈಲಿನೊಳಗೆ ಸಾಗಿಸಲು ಅಡಗಿಸಿಟ್ಟಿದ್ದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. 30 ಗ್ರಾಂ ಗಾಂಜಾ, 3 ಏರ್ಟೆಲ್ ಸಿಮ್ ಕಾರ್ಡ್ಗಳು, ಬೀಡಿ ಕಟ್ಟುಗಳು ದೊರೆತಿವೆ.

ಬಂಧಿತ ರಿತಿಕಾ ರೈ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಜೈಲಿನೊಳಗೆ ಈ ವಸ್ತುಗಳನ್ನು ಯಾರ ಸೂಚನೆಯ ಮೇರೆಗೆ ತರಲಾಗಿತ್ತು? ಇದರ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.

LEAVE A REPLY

Please enter your comment!
Please enter your name here