ಶಿವಮೊಗ್ಗ: ಹಂದಿ ಹಿಡಿಯಲು ಬಂದ ಯುವಕರ ಗುಂಪು ಬಲೆ ಹಾಕಿ ಬೀದಿ ನಾಯಿಯನ್ನು ಹಿಡಿದು ಕ್ರೂರವಾಗಿ ಬಡಿದು ಕೊಂದ ಘಟನೆ ಶಿವಮೊಗ್ಗದ ಗೋಪಾಳ ಪೊಲೀಸ್ ಬಡಾವಣೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೀದಿನಾಯಿ ಹಂದಿಮರಿಗಳನ್ನು ಹಿಡಿದು ತಿಂದು ಹಾಕಿದೆ ಎಂದು ಯುವಕರು ಸಿಟ್ಟಿಗೆದ್ದಿದ್ದು, ಬಲೆ ಹಾಕಿ ನಾಯಿಯನ್ನು ಹಿಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇಡೀ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದುಷ್ಕೃತ್ಯದ ವಿರುದ್ಧ ಪ್ರಾಣಿ ರಕ್ಷಣಾ ಸೇವೆ ತಂಡದವರು ತುಂಗಾ ನಗರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

