ಬೆಳ್ತಂಗಡಿ: ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಇಲ್ಲದೆ ಯಾವುದೇ ಸುದ್ದಿ ಮತ್ತು ಪ್ರಸ್ತುತ ಘಟನೆಗಳ ಮಾಹಿತಿ ಮತ್ತು ಸುದ್ದಿಯನ್ನು ಬಿತ್ತರಿಸುವಂತಿಲ್ಲ. ರಾಷ್ಟ್ರದ ಹಿತಾಸಕ್ತಿಯಿಂದ ಸುದ್ದಿ ಪ್ರಸಾರಕ್ಕೆ ಸಚಿವಾಲಯದ ಅನುಮತಿ ಅಗತ್ಯ. ಆದರೆ ಯೂಟ್ಯೂಬ್ ಚಾನೆಲ್ ಗಳಾದ ಡಿ ಟಾಕ್ಸ್ , ಕುಡ್ಲ ರ್ಯಾಂಪೇಜ್, ಮಹಮ್ಮದ ಸಮೀರ್, ವಾರ್ತಾ ಭಾರತಿ, ಕನ್ನಡ ಪ್ಲಾನೆಟ್ ಇವರುಗಳು ಸುದ್ದಿಯನ್ನು ಮತ್ತು ಸುಳ್ಳು ಸುದ್ದಿಯನ್ನು ಬಿತ್ತರ ಮಾಡಿದಲ್ಲದೆ . ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿದ್ದ ಚಿನ್ನಯ್ಯನ ಕಾನೂನು ಬಾಹಿರವಾಗಿ ಸಂದರ್ಶನ ಮಾಡಿ. ಭಾರತೀಯ ಕಾನೂನನ್ನು ನಗೆಪಾಟಲಿ ಮಾಡಿದ್ದಾರೆ. ಚಿನ್ನಯ್ಯನ್ನ ಸಂದರ್ಶನವನ್ನು ದೂರು ದಾಖಲಾತಿಗೂ ಮುನ್ನ ಅಥವಾ ದೂರು ದಾಖಲಾದ ನಂತರ ಅಥವಾ ಆರೋಪಿಯಾದ ನಂತರ ಈ ಮೂರು ರೀತಿಯಲ್ಲಿಯೂ ಸಂದರ್ಶನ ತೆಗೆದುಕೊಂಡಿದ್ದರು ಅದು ಅಪರಾಧ. ಈ ಯೂಟ್ಯೂಬರ್ ಗಳ ಹಣಕಾಸಿನ ಬಗ್ಗೆ ತನಿಖೆ ಆಗಬೇಕು ಈ ನಿಟ್ಟಿನಲ್ಲಿ ಎಸ್.ಐಟಿಗೆ ದೂರು ನೀಡಲಾಗಿದೆ. ದೂರನ್ನು ಎಸ್.ಐ.ಟಿ ಅಧಿಕಾರಿ ಸೈಮನ್ ಅವರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ.
—-ಪ್ರಶಾಂತ್ ಸಂಬರಗಿ, ಹಿಂದೂ ಹೋರಾಟಗಾರ, ಸಾಮಾಜಿಕ ಹೋರಾಟಗಾರ
Home Uncategorized ಧರ್ಮಸ್ಥಳದ ಬುರುಡೆ ಷಡ್ಯಂತ್ರದಲ್ಲಿ ಯೂಟ್ಯೂಬರ್ ಗಳ ಕೈವಾಡ : ಪ್ರಶಾಂತ್ ಸಂಬರಗಿಯಿಂದ ಎಸ್.ಐ.ಟಿಗೆ ದೂರು