ಬಂಟ್ವಾಳ : ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶವು ಜಾತಿ–ಮತ–ಭೇದಗಳನ್ನು ಮೀರಿ ಮಾನವೀಯತೆಯ ಆಧಾರದ ಮೇಲೆ ಸಮಾಜವನ್ನು ಒಗ್ಗೂಡಿಸುವ ಶಾಶ್ವತ ಚಿಂತನೆಯಾಗಿದೆ. ಗುರುಗಳ ತತ್ತ್ವಗಳು, ಶಾಂತಿ, ಸೌಹಾರ್ದತೆ ಮತ್ತು ಸಮತೋಲನದ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ. ಗುರುಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸಮಾಜ ಸಮರಸತೆ ಸಾಧ್ಯವಾಗುತ್ತದೆ ಎಂಬ ಸತ್ಯವನ್ನು ಈ ಚಿಂತನೆ ನಮಗೆ ನೆನಪಿಸುತ್ತದೆ ಎಂದು ಪೆರಿಯಾವು ಗುತ್ತು ಶಿವರಾಜ್ ಗಟ್ಟಿ ಹೇಳಿದರು.
ಅವರು ಜನವರಿ 01 ರಂದು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ರಾಮನಗರ ಮದ್ವದಲ್ಲಿ, ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನೆಯಲ್ಲಿ ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅರ್ಚಕರಾದ ರಮೇಶ್ ಆಚಾರ್ಯ, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಮಧ್ವ, ಗೌರವಾಧ್ಯಕ್ಷರಾದ ಶಿವಪ್ಪ ಗೌಡ ನಿನ್ನಿಕಲ್ಲು, ಸುರೇಂದ್ರ ಪೂಜಾರಿ ಮಧ್ವ ನೀರಲ್ಕೆ, ಕೃಷ್ಣ ಕುಲಾಲ್, ಭವಾನಿ ಶ್ರೀಧರ್ , ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮಧ್ವ ನಿರ್ದೇಶಕರಾದ ಧನುಷ್ ಮಧ್ವ ಯಶೋಧರ ಕಡಂಬಲಿಕೆ , ಮಹೇಶ್ ಬೊಳ್ಳಾಯಿ, ಸದಸ್ಯರಾದ ಪ್ರಶಾಂತ್ ಏರಮಲೆ ,ನವೀನ್ ಕುಡ್ಮೇರ್ ,ಯತೀಶ್ ಬೊಳ್ಳಾಯಿ, ಸಹನಾ ಕರ್ಕೇರ , ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ. ಶಿವಾನಂದ ಎಂ ನಾಗೇಶ್ ಪೊನ್ನೋಡಿ ಮತ್ತಿತರರು ಉಪಸ್ಥಿತರಿದ್ದರು. ಸಂಗೀತದಲ್ಲಿ ಸಾತ್ವಿಕ್ ದೇರಾಜೆ , ಕಾರ್ತಿಕ್ ದೇರಾಜೆ. ವಿನಯ ಆಚಾರ್ಯ ಸಹಕರಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು.

