ಬಂಟ್ವಾಳ : ಸಮಾಜ ಸೇವೆ, ಶಿಸ್ತು ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಪಾಲಿಸುತ್ತಾ, ಯುವಕರಲ್ಲಿ ಹೊಸ ಚೈತನ್ಯವನ್ನು ಯುವವಾಹಿನಿ ತುಂಬುತ್ತಿದೆ. ಶ್ರಮ ಮತ್ತು ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟ ಯುವವಾಹಿನಿ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವ ಶಕ್ತಿ ಹೇಗೆ ಬದಲಾವಣೆಗೆ ಕಾರಣವಾಗಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ನಿರಂತರ ಸೇವೆ, ಶಿಸ್ತು, ಮತ್ತು ಸಕಾರಾತ್ಮಕ ಚಿಂತನೆಗಳ ಮೂಲಕ ನಾರಾಯಣಗುರುಗಳ ಸಂದೇಶ ಅನುಷ್ಠಾನ ಮಾಡುತ್ತಿರುವ ಯುವವಾಹಿನಿ ಯುವ ಪೀಳಿಗೆಗೆ ಪ್ರೇರಣೆಯ ದೀಪವಾಗಿದೆ. ಎಂದು ಬಂಟ್ವಾಳ ತಾಲುಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ತಿಳಿಸಿದರು. ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಮೇನಾಡು ಉದಯ ಪೂಜಾರಿ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನೆಯಲ್ಲಿ ಗುರುಸಂದೇಶ ನೀಡುತ್ತಾ ಮಾತನಾಡಿದರು. ಯುವವಾಹಿನಿ ತನ್ನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿದೆ ಎಂದು ಗುರುತತ್ವವಾಹಿನಿ ಆತಿಥ್ಯ ನೀಡಿದ ಯುವವಾಹಿನಿ ಬಂಟ್ವಾಳ ಘಟಕದ ಆರೋಗ್ಯ ನಿರ್ದೇಶಕ ಉದಯ ಪೂಜಾರಿ ಮೇನಾಡು ತಿಳಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್, ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಧನುಷ್ ಮದ್ವ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಮಹೇಶ್ ಬೊಳ್ಳಾಯಿ ರಂಜಿತ್ ಬಿ.ಸಿ.ರೋಡ್ ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ
ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ, ಶಿವಾನಂದ ಎಮ್, ಹರೀಶ್ ಕೋಟ್ಯಾನ್ ಕುದನೆ, , ರಾಜೇಶ್ ಸುವರ್ಣ ಸಲಹೆಗಾರ ರಾಮಚಂದ್ರ ಸುವರ್ಣ ತುಂಬೆ ಸದಸ್ಯರಾದ
ನವೀನ್ ಕುಡ್ಮೇರು, ಆನಂದ ಪೂಜಾರಿ ಅಜ್ಜಿಬೆಟ್ಟು, ಸುದೀಪ್ ಸಾಲ್ಯಾನ್ , ನವೀನ್ ಕಾರಾಜೆ, ನಾರಾಯಣ ಪಲ್ಲಿಕಂಡ
ಯತೀಶ್ ಬೊಳ್ಳಾಯಿ, ಹರಿಣಾಕ್ಷಿ ನಾವೂರು ಮತ್ತಿತರರು ಉಪಸ್ಥಿತರಿದ್ದರು
ಸಂಗೀತದಲ್ಲಿ ಸಾತ್ವಿಕ್ ದೇರಾಜೆ ರಾಜೇಶ್ ಅಮ್ಟೂರು, ವಿನಯ ಆಚಾರ್ಯ ಸಹಕರಿಸಿದರು. ಯುವವಾಹಿನಿ ಬಂಟ್ವಾಳ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು.