ಮೂಡುಬಿದಿರೆ: ಯುವ ವಾಹಿನಿ (ರಿ), ಮೂಡುಬಿದಿರೆ ಘಟಕದ ವತಿಯಿಂದ ʻಆಟಿದ ಕೂಟ – 2024ʼ ಜು. 28ರ ಆದಿತ್ಯವಾರ ನಡೆಯಲಿದೆ. ಮೂಡುಬಿದಿರೆಯ ಒಂಟಿಕಟ್ಟೆಯ ಕಡಲಕೆರೆಯಲ್ಲಿರುವ ಸೃಷ್ಟಿ ಮಲ್ಟಿಪರ್ಪಸ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಿಲ್ಲವ ಸಂಘ (ರಿ), ಮೂಡುಬಿದಿರೆಯ ಮಾಜಿ ಅಧ್ಯಕ್ಷ ಪದ್ಮಯ್ಯ ಬಿ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಯುವ ವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಸೀತಾರಾಮ್ ಕುಮಾರ್ ಕಟೀಲ್‌ರವರು ಆಟಿ ಕುರಿತು ಉಪಾನ್ಯಾಸ ನೀಡಲಿದ್ದಾರೆ. ಯುವ ವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ. ಮತ್ತು ಗಂಜಿಮಠ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಮಾಲತಿ ಗೋಪಿನಾಥ್ ಉಪಸ್ಥಿತರಿರಲಿದ್ದಾರೆ. ಭಾರತ್ ಬ್ಯಾಂಕ್ ಮುಂಬಯಿ ಇದರ ಮಾಜಿ ಮ್ಯಾನೇಜರ್ ಸತೀಶ್ ಎನ್. ಬಂಗೇರ, ಮೂಡುಬಿದಿರೆಯ ಭಗವತಿ ಫ್ಲವರ್ಸ್‌ನ ಉಮೇಶ್ ಕೋಟ್ಯಾನ್‌ರವರಿಗೆ ಆಟಿಯ ಸನ್ಮಾನ ನಡೆಯಲಿದೆ.
ಗುರುಪುರ ಕೈಕಂಬ ಉಪ ತಹಶೀಲ್ದಾರ್ ಶಿವಪ್ರಸಾದ್ ಕಾರ್ಕಳ ಇವರ ನೇತೃತ್ವದಲ್ಲಿ ಯುವ ವಾಹಿನಿ ಸದಸ್ಯರಿಗೆ ಜಾನಪದ ಆಚಾರ ವಿಚಾರದ ಬಗ್ಗೆ ಭಾಷಣ ಸ್ಪರ್ಧೆ, ಹಾಸ್ಯ ಸ್ಪರ್ಧೆ, ಹೊಸ ಮಾದರಿಯ ಆಟ ಸ್ಪರ್ಧೆಗಳು ನಡೆಯಲಿವೆ. ಗೆದ್ದವರಿಗೆ ಬಹುಮಾನವಿರುತ್ತದೆ ಎಂದು ಯುವ ವಾಹಿನಿ ಮೂಡುಬಿದಿರೆ ಘಟಕದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜು.28ರಂದು ಯುವ ವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ʻಆಟಿದ ಕೂಟ – 2024ʼ
RELATED ARTICLES