ಜೂಂಬಿ ಮಾದಕ ವಸ್ತು ಭೀತಿ : ಡೆಲಿವರಿ ಬಾಯ್ 2 ಗಂಟೆ ಸ್ಥಬ್ಧ

0
63

ಚಂಡೀಗಢ : ಚಂಡೀಗಢದ ಸೆಕ್ಟರ್ 33Bನಲ್ಲಿ ನಡೆದ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬ್ಲಿಂಕಿಟ್ ವಿತರಣಾ ಕೆಲಸಗಾರನೊಬ್ಬ ಸುಮಾರು ಎರಡು ಗಂಟೆಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾಗಿ ನಿಂತಿದ್ದನ್ನು ನೋಡಿದ ನಂತರ ನಿವಾಸಿಗಳು ಆತಂಕಗೊಂಡಿದ್ದಾರೆ.

ಆ ವ್ಯಕ್ತಿ ಬಾಯಿಯಲ್ಲಿ ಸಿಗರೇಟ್ ಹಿಡಿದುಕೊಂಡು ಒಂದು ದಿಕ್ಕಿನಲ್ಲಿ ನೋಡುತ್ತಾ, ಯಾವುದೇ ಚಲನೆ ಇಲ್ಲದೇ ಬೊಂಬೆಯಂತೆ ನಿಂತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಟ್ವೀಟರ್’ನಲ್ಲಿ ಹಂಚಿಕೊಂಡ ಪೋಸ್ಟ್’ನಲ್ಲಿ, ಖಲಿಸ್ತಾನಿಗಳ ಸಹಾಯದಿಂದ ಪಾಕಿಸ್ತಾನವು ಭಾರತದಲ್ಲಿಯೂ ಫೆಂಟನಿಲ್ ಹರಡುತ್ತಿದೆ. ಅಂದ್ಹಾಗೆ, ಇದು ಅಮೆರಿಕದ ಬೀದಿಗಳನ್ನ ನಾಶಪಡಿಸಿದ ಅತ್ಯಂತ ಅಪಾಯಕಾರಿ ಮಾದಕ ವಸ್ತುವಾಗಿದೆ” ಎಂದು ಬರೆಯಲಾಗಿದೆ.

LEAVE A REPLY

Please enter your comment!
Please enter your name here