ಉಡುಪಿ ಮೇ 09 ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಇಲ್ಲಿ ನೆಡೆಯುತ್ತಿರುವ ಭಜನಾ ಸಪ್ತಾಹದ 125ನೇ ವರ್ಷದ ಆಚರಣೆಯ ಅಂಗವಾಗಿ ನಡೆಯುತ್ತಿರುವ 125 ದಿನಗಳ ಅಖಂಡ ಭಜನಾ ಮಹೋತ್ಸವದ( 100 ದಿನ ) ಶತ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಭಜನಾ ಮಹೋತ್ಸವವನ್ನು ಶ್ರೀ ಕಾಶೀಮಠದ ಇಪ್ಪತ್ತನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸ್ವಂಪನ್ನ ಗೊಂಡಿತ್ತು
ಮೇ 08 ಗುರುವಾರ ರಂದು ಶ್ರೀದೇವರ ಸನ್ನಿಧಿಯಲ್ಲಿ ಬೆಳಿಗ್ಗೆ 8:05 ಕ್ಕೆ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು, ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ 100 ವಿಶೇಷ ಪವಮಾನಾಭಿಷೇಕವು ನಡೆಯಿತು. ಮಧ್ಯಾಹ್ನ 12:30ಕ್ಕೆ ಭಜನಾ ಆರಾಧನಾ ದೇವರಾದ ಶ್ರೀ ವಿಠೋಭ-ರಖುಮಾಯಿ ದೇವರಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ಸೇವಾದಾರರಿಗೆ ಪ್ರಸಾದ ವಿತರಣೆ ನಡೆಯಿತು.
ಸಂಜೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣ ಬಳಿಕ, “ಶ್ರೀಮದ್ ಸುಧೀಂದ್ರ ತೀರ್ಥ ಶತಮಾನ ಸ್ಮರಣ” ವಿಶೇಷ ಭಜನಾ ಸೇವೆಯು ದೇವಳದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾತ್ರಿ ಶ್ರೀ ನರಸಿಂಹ ಸ್ತುತಿ ಪಠಣ, ಸಾಮೂಹಿಕ ನಮಸ್ಕಾರ ಸೇವೆ, ನಂತರ ಶ್ರೀ ದೇವರಿಗೆ ವಿಶೇಷ ಹೂವಿನ ಪೂಜೆ ಮತ್ತು ರಾತ್ರಿ ಪೂಜೆಯು ಜರುಗಿತು. ಬಳಿಕ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗುರು ಗುಣಗಾನ ಕಾರ್ಯಕ್ರಮಗಳು ಜರಗಿತು ಸಾವಿರಾರು ಭಕ್ತಾದಿಮಾನಿಗಳು ಭಾಗಿಯಾಗಿ ದೇವರ ಮತ್ತು ಗುರುವಿನ ಕೃಪಕಟಾಕ್ಷಕ್ಕೆ ಪಾತ್ರರಾದರು.
ರಾತ್ರಿ 9:00ಕ್ಕೆ ಪ್ರಸಿದ್ಧ ಭಜನೆ ಕಲಾವಿದೆಯಾದ ವಿದುಷಿ ಮಹಾಲಕ್ಷ್ಮಿ ಶೆಣೈ ಕಾರ್ಕಳ “ಸುಧಾಮೃತ”, ಭಜನಾ ಸೇವೆಯು ನೆರವೇರಿಸಿಕೊಟ್ಟರು., ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ ಹಾಗೂ ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು , ಊರ ಪರಊರಿನ ಭಜನಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಬಾಂಧವರು ಮಹೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿದರು

