ಮಂಗಳೂರು : ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ತೀರ್ಪುಗಾರರಾದ ವಿನೋದ್ ಕುಮಾರ್ ಎಮ್. ಇವರು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್‌ಸ್ ಪವರ್‌ಲಿಫ್ಟಿಂಗ್ M66 ಕೆಜಿ ಸ್ಪರ್ಧೆಯಲ್ಲಿ ರಜತ ಪದಕ (ಸೆಲ್ವರ್ ಮೆಡಲ್) ಗಳಿಸಿದ್ದಾರೆ. ಇವರು ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿಗಳಾಗಿದ್ದಾರೆ. ಇವರಿಗೆ ಬಲಂಜನೇಯ ಜಿಮ್‌ನ ಏಕಲವ್ಯ ಪ್ರಶಸ್ತಿ ವಿಜೇತರಾಗಿರುವ ಪವರ್‌ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕುದ್ರೋಳಿ ಗುರುಗಳಾಗಿದ್ದಾರೆ.