ಸರಕಾರದಿಂದ ನೇಮಿಸ್ಪಟ್ಟ 108 ಆಂಬುಲೆನ್ಸ್ ಸೇವೆಯ ಜವಾಬ್ದಾರಿ ಹೊತ್ತಿರುವ ಗ್ರೀನ್ ಹೆಲ್ತ್ ಸರ್ವಿಸ್ ಕಳೆದ ಎರಡು ವರ್ಷಗಳಿಂದ ಸಿಬ್ಬಂದಿಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಸರಿಯಾದ ಸಮಯಕ್ಕೆ ವೇತನ ನೀಡದೆ, ಈ ಹಿಂದೆ ನೀಡುತ್ತಿದ್ದ ರೂ 36000 ವೇತನವನ್ನು ರೂ 15000ಕ್ಕೆ ಕಡಿತ ಮಾಡಿದ್ದು ಅಲ್ಲದೆ, ಅದನ್ನು ಸರಿಯಾದ ಸಮಯಕ್ಕೆ ನೀಡದೆ ಇರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆ ಸಿಬ್ಬಂದಿಗಳ ಪಾಲಿಗೆ ಕಷ್ಟಕರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡು ತಿಂಗಳ ವೇತನ ವನ್ನು ನೀಡದೆ ಇರುವುದರಿಂದ ದಿಕ್ಕುತೋಚದೆ ಈ ಮೂಲಕ ಸರಕಾರದ ಗಮನಕ್ಕೆ ತಂದು ಈ ತಿಂಗಳ ದಿನಾಂಕ 10.06.25ರೊಳಗೆ ವೇತನ ಪಾವತಿಸದಿದ್ದಲ್ಲಿ ಭಿಕ್ಷೆ ಬೇಡಲು ನಿರ್ಧಾರ ಮಾಡಿರುವುದು ನಿಜವಾಗ್ಲೂ ಶೋಚನಿಯ! ತಕ್ಷಣ ಈ ವಿಚಾರವನ್ನು ಪರಿಶೀಲನೆ ಮಾಡಿ ಎರಡು ತಿಂಗಳ ವೇತನವನ್ನು ಪಾವತಿಸುವಲ್ಲಿ ಸರಕಾರ ಮಧ್ಯಪ್ರವೇಶ ಮಾಡಿ 108 ಆಂಬುಲೆನ್ಸ್ ಸಿಬ್ಬಂದಿಗಳ ಕುಟುಂಬವನ್ನು ಕಾಪಾಡುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ.
ಭಿಕ್ಷೆ ಬೇಡಲು ನಿರ್ಧಾರ ಮಾಡಿರುವ 108 ಆಂಬುಲೆನ್ಸ್ ಸಿಬ್ಬಂದಿಗಳು!
RELATED ARTICLES