ಅವಿಭಜಿತ ದಕ್ಷಿಣ ಕನ್ನಡ ಜನಪದ ಶಾಖಾ ವಿಶ್ವ ವೈದಿಕ ಸಭಾ (ರಿ.)ಚತುರ್ದಶತಮಮ್ ಪುರೋಹಿತ ಸಮ್ಮೇಲನಮ್

0
6

ಮೂಡುಬಿದಿರೆ : ವೇದವಾಙ್ಮಯ ಪ್ರಪಂಚದಲ್ಲಿ ಸತ್ವಭರಿತ ಸಂಪತ್ತನ್ನು ಮಾನವ ಜನಾಂಗಕ್ಕೆ ಕೊಡುಗೆಯಾಗಿ ನೀಡಿದ ವೈದಿಕ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಅರಿತು ವಿಶ್ವವೈದಿಕ ಸಭಾವು ಕಾರ್ಯನಿರತಗೊಂಡಿರುತ್ತದೆ. “ಪುರೋಹಿತರಿಂದ – ಪುರೋಹಿತರಿಗಾಗಿ – ಪುರೋಹಿತರಿಗೋಸ್ಕರ” ಎಂಬ ವಾಕ್ಯದ ಮೇಲೆ 14ನೇ ವರ್ಷದ ಪುರೋಹಿತ ಸಮ್ಮೇಳನವು ಜರುಗಿತು. ಮೂಡುಬಿದಿರೆ ಶ್ರೀ ಶ್ರೀ ಶ್ರೀ ಅಯ್ಯಸ್ವಾಮೀ ಮಠದ ಎದುರು ಪಾಲ್ಕೆ ಇಂದಿರಾ ಸಭಾಭವನದಲ್ಲಿ ಆಷಾಡ ಮಾಸದ ಮೂರು ದಿನಗಳ ಪರ್ಯಂತರ ಸನಿವಾಸ ಪುರೋಹಿತ ಸಮ್ಮೇಲನವು ಸಂಪನ್ನಗೊಂಡಿತು.


“ಸಾರ್ಥಪುಣ್ಯಾಹ ವಾಚನಮ್” ವಿಷಯವನ್ನು ಪುರೋಹಿತ ಜಿ. ಎಸ್. ಪುರಂದರ ಆಚಾರ್ಯ ಮುನಿಯಾಲು, “ಸಂಸ್ಕಾರೇಷು ವೈದಿಕತ್ವಮ್” ವಿಷಯವನ್ನು ಶ್ರೀ ವಿದ್ವಾನ್ ಶ್ರೀಧರ ಭಟ್ಟ, ಪ್ರಾಚಾರ್ಯರು ವಿ.ಬಿ.ಎಸ್. ಸಂಸ್ಕೃತ ವಿದ್ಯಾಪೀಠ, ಕೊಡಂಕೂರು, ಉಡುಪಿ ಮತ್ತು “ವೇದಃ ಆಯುರ್ವೇದಶ್ಚ” ವಿಷಯವನ್ನು ಡಾ| ವಿವೇಕ ಜೆ., ಬಿಎಎಂಎಸ್, ಎಂಎಸ್. ಆಯುರ್ವೇದ, ಡಿವಿವಿ, ಪಿಎಚ್‌ಡಿ ಪ್ರಾಧ್ಯಾಪಕ, ಬೆಂಗಳೂರು ಹಾಗೂ ಡಾ| ಕವಿತಾ ಸಿ., ಬಿಎಎಂಎಸ್, ಎಂ.ಎಸ್ ಆಯುರ್ವೇದ, ಡಿವಿವಿ, ಪ್ರಾದ್ಯಾಪಿಕೆ ಬೆಂಗಳೂರು ಇವರಿಂದ ಗೋಷ್ಠಿಗಳು ಪ್ರವಚನಗಳಾದವು. ಸಮನ್ವಯವನ್ನು ಗೋಷ್ಟ್ಯಾಂಧಿಪತಿಗಳು ನೆರವೇರಿಸಿದರು.


ಸಭಾದ ಸಂಪ್ರದಾಯದಂತೆ ಸಮ್ಮೇಳನದಲ್ಲಿ ಉಪಸ್ಥಿತರಿರುವ ಹಿರಿಯ ವೈದಿಕರಾದ ಸಭಾದ ಗೌರವಾಧ್ಯಕ್ಷ ನೆಲ್ಲಿಕಾರು ಶ್ರೀಧರ ಪುರೋಹಿತರು, ಶ್ರೀ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತರು, ಪ್ರಧಾನ ಸಂಚಾಲಕ ಎಲ್ಲೂರು ಶಿವಶಂಕರ ಪುರೋಹಿತರು, ಸಮ್ಮೇಳನಾಧಿಕಾರಿ ಜಗನ್ನಾಥ ಪುರೋಹಿತರು ಮೂಡುಬಿದಿರೆ, ಬಜ್ಪೆ ಬಾಲಚಂದ್ರ ಪುರೋಹಿತರು ದೀಪ ಬೆಳಗಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಉತ್ತಮ ಸಂಖ್ಯೆಯ ಪುರೋಹಿತರ ಸನಿವಾಸ ಸಮ್ಮೇಳನವು ವಿವಿಧ ವೇದಾಧರಿತ ವಿಷಯಗಳು ಹಾಗೂ ವರ್ತಮಾನ ಕಾಲದಲ್ಲಿ ವೈದಿಕ ಕಾರ್ಯಕ್ರಮದ ಸ್ಥಿತಿ ಗತಿ, ವೈದಿಕರ ಸ್ಥಿತಿಗತಿಯನ್ನು ಚರ್ಚಿಸಿಕೊಳ್ಳಲಾಯಿತು. ಎಲ್ಲಾ ವಲಯದ ಸಂಚಾಲಕರು – ಸಂಯೋಜಕರ ಸಹಕಾರದಿಂದ ಹಾಗೂ ಹಿರಿಯ ಕಿರಿಯ ಪುರೋಹಿತರ ಉಪಸ್ಥಿತಿಯಿಂದ ಸಮ್ಮೇಳನವು ಸೊಗಸಾಗಿ ಅರ್ಥಪೂರ್ಣವಾಗಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಪ್ರಧಾನ ಸಂಚಾಲಕರು, ಗೌರವಾಧ್ಯಕ್ಷರು, ಸಮ್ಮೇಳನಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಸಮಾಜದ ಅತೀ ಬಡತನದಲ್ಲಿ ವಿದ್ಯಾಕಾಂಕ್ಷಿಯಾಗಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸುಮಾರು ೨೬ಸಾವಿರ ರೂಪಾಯಿಯನ್ನು ೭ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸುಜ್ಞಾನ ನಿಧಿಯಾಗಿ ನೀಡಲಾಯಿತು. ಅಪಘಾತ, ಪ್ರಾಕೃತಿಕ ವಿಕೋಪ, ತೀವ್ರನಿಗಾರೋಗಿಗಳನ್ನು ಆಯ್ಕೆಮಾಡಿ ಆರ್ಯನಿಧಿಯನ್ನು ಮತ್ತು ಸುಖಾಶ್ರಯ ವಂಚಿತರಿಗೆ ಸೂರು ಯೋಜನೆಯಡಿಯಲ್ಲಿ ಭಾಗ್ಯನಿಧಿಯಾಗಿ ಸುಮಾರು ೧,೦೫,೦೦೦/-ರೂಪಾಯಿಯನ್ನು ೨೦೨೫-೨೬ನೇ ಸಾಲಿನಲ್ಲಿ ನೀಡಲಾಯಿತು.
ಅಭಿಲಾಷ ಪುರೋಹಿತರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಸಂಯೋಜಕ ಸೂಡ ಗಣೇಶ ಪುರೋಹಿತರು ವರದಿ ವಾಚಿಸಿದರು. ಸಮ್ಮೇಳನದ ಅನುಭವವನ್ನು ವಿವೇಕ ಪುರೋಹಿತ್ ಕೊಯ್ಯೂರು ವ್ಯಕ್ತಪಡಿಸಿದರು. ಖಜಾಂಚಿ ಪದ್ಮನಾಭ ಪುರೋಹಿತ್ ಬಾಳಿಂಜ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಸಂಚಾಲಕರಾದ ಎಲ್ಲೂರು ಶಿವಶಂಕರ ಪುರೋಹಿತರು ಸರ್ವರನ್ನೂ ಸ್ವಾಗತಿಸಿ, ಸಭಾದ ಬೆಳವಣಿಗೆಗೆ ಉದ್ದೇಶ, ಗುರಿ, ಸಾಧನೆಯತ್ತ ಹೆಜ್ಜೆ ಎಂಬಂತೆ ಆಶಯದ ಮಾತುಗಳನ್ನಾಡಿದರು. ಸವಣಾಲು ಶಿವಪ್ರಸಾದ ಪುರೋಹಿತರು ನಿರೂಪಿಸಿದ ಕಾರ್ಯಕ್ರಮಕ್ಕೆ ಸಂಘಟನಾ ಕಾರ್ಯದರ್ಶಿ ಬ್ರಹ್ಮಾವರ ಗಣೇಶ ಪುರೋಹಿತರು ವಂದಿಸಿದರು.