ಉಜಿರೆ: ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಎದುರು ನಿರ್ಮಾಣಗೊಳ್ಳುತ್ತಿರುವ ಕೀರ್ತಿಶೇಷ ವಿಜಯರಾಘವ ಸ್ಮಾರಕ ಗೋಪುರ ನಿರ್ಮಾಣಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸಾದರೂಪವಾಗಿ ಮಂಜೂರು ಮಾಡಿದ ೧೫ ಲಕ್ಷ ರೂ. ನ ಡಿ.ಡಿ. ಯನ್ನು ಡಿ. ಹರ್ಷೇಂದ್ರ ಕುಮಾರ್ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೋಹನ ಕುಮಾರ್, ರವಿ ಚಕ್ಕಿತ್ತಾಯ, ರಾಘವೇಂದ್ರ ಬೈಪಾಡಿತ್ತಾಯ, ರವೀಂದ್ರ ಶೆಟ್ಟಿ, ಮಂಜುನಾಥ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
Home Uncategorized ಕೀರ್ತಿಶೇಷ ವಿಜಯರಾಘವ ಪಡ್ವೆಟ್ನಾಯ ಸ್ಮಾರಕ ಗೋಪುರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೧೫ ಲಕ್ಷ ರೂ....