ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜ ಗ್ರಾಮದಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಪ್ರತಿಷ್ಠಾ ಮಹೋತ್ಸವದ ೩೯ನೆ ವಾರ್ಷಿಕೋತ್ಸವದ ಅಂಗವಾಗಿ ಮೇ. ೩ ರಂದು ಶನಿವಾರ ಬೆಳಿಗ್ಯೆಯಿಂದ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ೨೪ ಕಲಶಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಜಿನಭಜನೆ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ. ರಾಜವೀರ ಇಂದ್ರ ತಿಳಿಸಿದ್ದಾರೆ.
ಅಳಿಯೂರು ಆದಿರಾಜ ಜೈನ್ ನೇತೃತ್ವದಲ್ಲಿ ಸಂಗೀತ ಮತ್ತು ಭಜನೆಯೊಂದಿಗೆ ಶ್ರಾವಕರು ಮತ್ತು ಶ್ರಾವಕಿಯರಿಂದ ಹನ್ನೆರಡು ವೃತಗಳ ಪೂಜೆ ನಡೆಯಲಿದೆ.
ಧಾರ್ಮಿಕ ಸಭೆ: ಭಾರತೀಯ ಜೈನ್ ಮಿಲನ್, ಮಂಗಳೂರು ವಲಯದ ಉಪಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ನಾರಾವಿ ಅಜಿತ್ ಕುಮಾರ್ ಜೈನ್ ಧಾರ್ಮಿಕ ಉಪಾನ್ಯಾಸ ನೀಡುವರು.
ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ
RELATED ARTICLES