ಮೂಡುಬಿದಿರೆ : ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಪಣಪಿಲ ವತಿಯಿಂದ 17ನೇ ವರ್ಷದ ಹೊನಲು ಬೆಳಕಿನ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳೋತ್ಸವ ನವೆಂಬರ್ 7ರ ಶನಿವಾರ ನಡೆಯಲಿದೆ.
ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಎ. ಕೋಟ್ಯಾನ್ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಯುವರಾಜ್ ಜೈನ್ ನಂದೊಟ್ಟು ಅವರ ಅಧ್ಯಕ್ಷತೆಯಲ್ಲಿ ಕಂಬಳೋತ್ಸವ ಆಯೋಜಿಸಲಾಗಿದೆ.
ಪಣಪಿಲದ ನಂದೊಟ್ಟು ಗುಡ್ಡಲ್ ಪಲ್ಕೆ ಜೋಡುಕರೆ ಕಂಬಳ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಕಂಬಳ ಸ್ಪರ್ಧೆಗಳು ಆರಂಭಗೊಳ್ಳಲಿವೆ. 17ನೇ ವರ್ಷದ ಈ ಕಂಬಳೋತ್ಸವದಲ್ಲಿ ವಿವಿಧ ಭಾಗಗಳ ಕೋಣಗಳ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.
ಕಂಬಳೋತ್ಸವಕ್ಕೆ ಉದ್ಯಮಿಗಳಾದ ಪ್ರದೀಪ್ ಜೈನ್ ವಾಲ್ಪಾಡಿ ಹಾಗೂ ಶರಣ್ ರಾಜ್ ಜೈನ್ ಮಂಗಳೂರು ಹಾಗೂ ಕಾರ್ಯಾಧ್ಯಕ್ಷರಾದ ಸುಭಾಶ್ ಚಂದ್ರ ಚೌಟ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಪಣಪಿಲ, ಪ್ರಧಾನ ಕಾರ್ಯದರ್ಶಿ ಕೆ.ಅಶ್ವಥ್ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಅವರು ಶುಭ ಹಾರೈಸಿದ್ದಾರೆ.
.

