ಕ್ರೆಡಿಟ್ ಕಾರ್ಡ್ ಮೂಲಕ ₹2 ಲಕ್ಷ ಆನ್‌ಲೈನ್ ವಂಚನೆ-ಪ್ರಕರಣ ದಾಖಲು

0
74

ಉಡುಪಿ : ಕ್ರೆಡಿಟ್ ಕಾರ್ಡ್‌ನ ಒಟಿಪಿಯನ್ನು ಪಡೆದು ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಸತೀಶ(41) ಎಂಬವರು 2025ರ ನ.10ರಂದು ಪಡೆದ ಕ್ರೆಡಿಟ್ ಕಾರ್ಡ್‌ನ್ನು ಉಪಯೋಗಿಸದೇ ಇಟ್ಟುಕೊಂಡಿದ್ದು, ಡಿ.20ರಂದು ಬ್ಯಾಂಕಿಗೆ ಹೋದಾಗ ಅವರ ಕ್ರೆಡಿಟ್ ಕಾರ್ಡ್‌ನಿಂದ 2ಲಕ್ಷ ರೂ. ಬಳಸಿರುವುದು ತಿಳಿದುಬಂತು.

ಕ್ರೆಡಿಟ್ ಕಾರ್ಡ್‌ನ್ನು ಉಪಯೋಗಿಸದೇ ಹಾಗೂ ಕಾರ್ಡಿನ ಪಿನ್ ಜನರೇಟ್ ಮಾಡದೇ ಹಾಗೇ ಇಟ್ಟಿದ್ದರೂ ಆರೋಪಿಗಳು, ಆನ್‌ಲೈನ್ ಮೂಲಕ ಸತೀಶ್ ಅವರಿಗೆ ಗೊತ್ತಾಗದ ರೀತಿಯಲ್ಲಿ ಕ್ರೆಡಿಟ್ ಕಾರ್ಡ್‌ನ ಒಟಿಪಿಯನ್ನು ಪಡೆದು 2 ಲಕ್ಷ ರೂ. ವಂಚಿಸಿರುವುದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here