ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಆದೇಶದಂತೆ ನಡೆದ 20 ದಿನಗಳ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ ಶೀರೂರು ಮಠದ ಸಭಾಂಗಣದಲ್ಲಿ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಿಬಿರದ ವಿದ್ಯಾರ್ಥಿಗಳಿಂದ ತಾವು ಕಲಿತ ಪಾಠಗಳ ಪ್ರದರ್ಶನ ನಡೆಯಿತು ಹಾಗೂ ಶಿಬಿರದ ವಿದ್ಯಾರ್ಥಿಗಳಿಂದ ಮಹಾಭಾರತದಲ್ಲಿರುವ ಕಚನ ಗುರುಭಕ್ತಿಯ ಕಥೆಯ ನಾಟಕ ನಡೆಯಿತು.
ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.ಪ್ರಸ್ತಾವನೆಗೈದು ಆನಂದತೀರ್ಥ ಆಚಾರ್ಯ ಹಾಗೂ ವಿಷ್ಣುಪ್ರಸಾದ್ ಪಾಡಿಗಾರು ಧನ್ಯವಾದ ಸಮರ್ಪಣೆ ಮಾಡಿದರು.

