28ನೇ ವರ್ಷದ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳ ಸಂಪನ್ನ

0
19

ಬೈಂದೂರು : ಕರ್ನಾಟಕ ರಾಜ್ಯದ ಮೊದಲ ಕಂಬಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳದ 28ನೇ ವರ್ಷದ ಕಂಬಳವು ಸೆ.20ರಂದು ನಡೆಯಿತು. ಕಂಬಳದ ಆಯೋಜಕರಾದ ಕಾಡಿನತಾರು ನಿವಾಸಿ ಹಾಗೂ ಹೈಕೋರ್ಟ್ ವಕೀಲ ಸಂತೋಷ್ ಪೂಜಾರಿ ಕಾಡಿನತಾರು ಅವರ ನೇತೃತ್ವದಲ್ಲಿ ಕಂಬಳವು ಸಂಭ್ರಮದಿಂದ ನಡೆಯಿತು.

ಕಂಬಳದಲ್ಲಿ ವಿವಿಧ ವಿಭಾಗಗಳಲ್ಲಿ ಕೋಣಗಳನ್ನು ಓಡಿಸಿ ಸ್ಪರ್ಧಿಗಳು ಗಮನ ಸೆಳೆದರು. ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಹಾಗೂ ಹಲಗೆ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು.

ಸಬ್ ಜೂನಿಯರ್ ವಿಭಾಗ

ಪ್ರಥಮ: ರಿಶಾನ ರೀತಿಕ್ ಪೂಜಾರಿ, ಹೊಳೆಕಡಿಮನೆ–ಯಳಜಿತ್ — ಚಿನ್ನದ ನಾಣ್ಯ

ದ್ವಿತೀಯ: ಶ್ರೀ ದುರ್ಗಾ ಯುವ ಬಳಗ, ಕೊಡ್ಲಿ–ಬಾರ್ಕೂರು — ಬೆಳ್ಳಿ ನಾಣ್ಯ

ಜೂನಿಯರ್ ವಿಭಾಗ

ಪ್ರಥಮ: ಬೈಂದೂರು–ತಗ್ಗರ್ಸೆ ನೀಲಕಂಠ ಹುದಾರ್ — ಚಿನ್ನದ ನಾಣ್ಯ

ದ್ವಿತೀಯ: ಗುಡ್ಡೆ ಶ್ರೀ ಮಹಾಲಿಂಗೇಶ್ವರ ಅನುಗ್ರಹ ಶಂಕರ ದೇವಾಡಿಗ — ಬೆಳ್ಳಿ ನಾಣ್ಯ

ಸೀನಿಯರ್ ವಿಭಾಗ

ಪ್ರಥಮ: ಪನ್ನಗ ಪ್ರತ್ವಿನ್ ಹೆಬ್ಬಾರ್, ಭಟ್ಕಳ — ಚಿನ್ನದ ನಾಣ್ಯ

ದ್ವಿತೀಯ: ಕೋಟ–ಮಣೂರು–ಪಡುಕೆರೆ ದಿ. ಶೀನ ಪೂಜಾರಿ — ಬೆಳ್ಳಿ ನಾಣ್ಯ

ಹಲಗೆ ವಿಭಾಗ

ಪ್ರಥಮ: ಮೊಳೆಬೈಲು ಶುಕ್ರ ಪೂಜಾರಿ, ಗಂಗೆಬೈಲು–ಕೊಡೇರಿ — ಚಿನ್ನದ ನಾಣ್ಯ

ದ್ವಿತೀಯ: ಸಂತೋಷ್ ಪೂಜಾರಿ ಕಾಡಿನತಾರು, ಹೈಕೋರ್ಟ್ ವಕೀಲರು — ಬೆಳ್ಳಿ ನಾಣ್ಯ

ಕಂಬಳದ ಯಶಸ್ವಿ ಆಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಕಂಬಳಾಭಿಮಾನಿಗಳು, ಸಂಘಟಕರು, ಕಂಬಳ ಸಮಿತಿ ಸದಸ್ಯರು, ಸ್ಪರ್ಧಿಗಳು ಹಾಗೂ ಸಾರ್ವಜನಿಕರಿಗೆ ಆಯೋಜಕ ಸಂತೋಷ್ ಪೂಜಾರಿ ಕಾಡಿನತಾರು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.