ಲಯನ್ಸ್ ಕ್ಲಬ್ ಪರ್ಕಳ ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಅಭಿರಾಜ್ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶ್ರೀವತ್ಸ ಉಡುಪಿ ಮತ್ತು ಕೋಶಾಧಿಕಾರಿಯಾಗಿ ಭಗೀರಥ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಜು.2ರಂದು ಉಡುಪಿಯ ಪುರಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ (317ಡಿ) ಅರವಿಂದ್ ಶೆಣೈ ಉಡುಪಿ ಅವರು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.
ಜಿಲ್ಲಾ ಕಾರ್ಯದರ್ಶಿ ಸದಾನಂದ ನಾವಡ, ವಲಯಾಧ್ಯಕ್ಷ ಶೇಖರ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ವಿನೋದ, ಲಿಯೋ ಜಿಲ್ಲಾಧ್ಯಕ್ಷೆ ಸಂಜನಾ ಬಾಳಿಗ, ನಿಕಟಪೂರ್ವ ಜಿಲ್ಲಾ ಗವರ್ನರ್ (317ಸಿ) ಸಪ್ನಾ ಸುರೇಶ್ ಉಪಸ್ಥಿತರಿದ್ದರು.

