ಮೂಡುಬಿದಿರೆ: 39 ವರ್ಷದ ಮೂಡುಬಿದಿರೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನವರು ಕೃಷ್ಣ ಕಟ್ಟೆಯ ವೇದಿಕೆಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದೆ.
ಈ ವರ್ಷ ಕೂಡ ಆಗಸ್ಟ್ 16ರಂದು ಕೃಷ್ಣ ಕಟ್ಟೆಯ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ಗಂಟೆ 10 ರಿಂದ ಪ್ರೇಕ್ಷ ದೇವಾಡಿಗ ಮತ್ತು ಬಳಗದವರ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12 ರಿಂದ ಕಾರ್ಕಳದ ಯೋಗೀಶ್ ಕಿಣಿ ಮತ್ತು ಬಳಗದವರ ಭಕ್ತಿರಾಗ, ಮಧ್ಯಾಹ್ನ ಗಂಟೆ 2:00 ರಿಂದ ನೃತ್ಯ ವಸಂತ ನಾಟ್ಯಾಲಯ ಕುಂದಾಪುರದವರಿಂದ ನೃತ್ಯ ಸಿಂಚನ ಕಾರ್ಯಕ್ರಮ. ಸಂಜೆ 4:30 ರಿಂದ ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಣೆ, ವೇದಮೂರ್ತಿ ಅಲಂಗಾರು ಈಶ್ವರ ಭಟ್ ರಿಗೆ ಶ್ರೀ ಕೃಷ್ಣ ಪ್ರಶಸ್ತಿ, ಸಭಾ ಕಾರ್ಯಕ್ರಮ ನಡೆಯಲಿದೆ. ತರುವಾಯ ಸುಖದ ಬರುವೆ ಶಿಷ್ಯ ವೃಂದದವರ ನೃತ್ಯ ಅರ್ಚನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ

