ಮುಲ್ಕಿ : ಕಿನ್ನಿಗೋಳಿ ಕಮ್ಮಾಜೆ ನೇಕಾರ ಕಾಲೋನಿ ಬಳಿಯ ನಿವಾಸಿ ಜಯರಾಮ್ ಗೌಡ (59) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಯರಾಮ್ ಗೌಡ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಬುಧವಾರ ರಾತ್ರಿ ಮನೆಯ ಮಲಗುವ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಮುಸ್ಸಂಜೆಯ ವೇಳೆಗೆ ಘಟನೆ ಸ್ಥಳೀಯರ ಗಮನಕ್ಕೆ ಬಂದಿದೆ.
ಜಯರಾಮ್ ಗೌಡ ಅವರು ಹಲವು ವರ್ಷಗಳಿಂದ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಬಳಿಕ ಅನಾರೋಗ್ಯದ ಕಾರಣ ಚಾಲಕ ವೃತ್ತಿಯಿಂದ ದೂರ ಸರಿದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

