60ನೇ ವರ್ಷದ ಜನ್ಮದಿನೋತ್ಸವ ಅಭಿನಂದನಾ ಸಮಾರಂಭ, ಕಾಶಿ-ಅಭಿನಂದನಾ ಕೃತಿ ಬಿಡುಗಡೆ

0
108

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ), ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 4 ನವಂಬರ್ 2025 ಮಂಗಳವಾರದಂದು ಒಂದು ದಿನದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಇದರ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ಅಭಿನಂದನಾ ಸಮಾರಂಭವು ಅಪರಾಹ್ನ ಗಂಟೆ 4.00 ಕ್ಕೆ ಸರಿಯಾಗಿ ನಡೆಯಲಿದೆ.
ಕಾರ್ಯಕ್ರಮಗಳು:- ಬೆಳಿಗ್ಗೆ ಗಂಟೆ 6:30 ರಿಂದ ಸುಪ್ರಭಾತ ಸೂರ್ಯೋದಯದಿಂದ 60 ಗಾಯಕ ಗಾಯಕರಿಂದ ಗಾಯನೋತ್ಸವ, ಬೆಳಿಗ್ಗೆ ಗಂಟೆ 8.00 ರಿಂದ ಧಾರ್ಮಿಕ ಸಂಪ್ರದಾಯದ ಪೂಜೆ ಪುರಸ್ಕಾರಗಳು
ಬೆಳಿಗ್ಗೆ ಗಂಟೆ 9.15ಕ್ಕೆ ಕನ್ನಡಮ್ಮನ – ತಾಯಿ ಭುವನೇಶ್ವರಿಯ ಛಾಯಾಚಿತ್ರದ ಅನಾವರಣ, ಬೆಳಿಗ್ಗೆ ಗಂಟೆ 9.30 ಕ್ಕೆ ರಾಷ್ಟ್ರ ಧ್ವಜಾರೋಹಣ, ಬೆಳಿಗ್ಗೆ ಗಂಟೆ 9. 45 ಕ್ಕೆ ಶಿವರಾಮ ಕಾಸರಗೋಡು – 60 ಫೋಟೋ ಗ್ಯಾಲರಿ ಉದ್ಘಾಟನೆ: ದೇಶ ವಿದೇಶಗಳಲ್ಲಿ ಭಾಗವಹಿಸಿದ ಅಪರೂಪದ ಛಾಯಾಚಿತ್ರ ಪ್ರದರ್ಶನ, ಬೆಳಿಗ್ಗೆ ಗಂಟೆ 10:30 ಕ್ಕೆ ಕರ್ನಾಟಕ ಏಕೀಕರಣ, ಕಾಸರಗೋಡು ವಿಲೀನೀಕರಣಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ, ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜ್ಯಾರಿಗಾಗಿ ಒತ್ತಾಯಿಸಿ ನಿರಂತರವಾಗಿ ದುಡಿದು ಸೇವೆ ಸಲ್ಲಿಸಿ ಕೀರ್ತಿ ಶೇಷರಾದ 60 ಮಂದಿ ಕನ್ನಡ ಸತ್ಯಾಗ್ರಹಿಗಳು, ಕನ್ನಡ ಕಟ್ವಾಳುಗಳು, ಕನ್ನಡ ಹೋರಾಟಗಾರರು ಕನ್ನಡ ಸಂಘಟನೆಗಳ ಮುಖಂಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು.
ಬೆಳಿಗ್ಗೆ ಗಂಟೆ 11.00 ಕ್ಕೆ ರಾಜ್ಯಮಟ್ಟದ ಕವಿಗೋಷ್ಠಿ, ಮಧ್ಯಾಹ್ನ ಗಂಟೆ 12.00 ಕ್ಕೆ ಕಾಸರಗೋಡು ಕನ್ನಡಿಗ – ಗಡಿನಾಡು – ಹೊರನಾಡು ಕನ್ನಡಿಗ – ಕರ್ನಾಟಕ ಸರಕಾರ – ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
ಅಪರಾಹ್ನ ಗಂಟೆ 2.00 ಕ್ಕೆ ಖ್ಯಾತ ಗಾಯಕ ಗಾಯಕರಿಂದ ಸುಗಮ ಸಂಗೀತ ಗಾಯನೋತ್ಸವ. ಅಪರಾಹ್ನ ಗಂಟೆ 3.00 ಕ್ಕೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಂಸ್ಕೃತಿಕ ರಾಯಬಾರಿಗಳು ಹಾಗೂ ವಿವಿಧ ಕ್ಷೇತ್ರದ ಕನ್ನಡ ಸಾಧಕರಿಗೆ, ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ. ಅಪರಾಹ್ನ ಗಂಟೆ 4.00 ಕ್ಕೆ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನೋತ್ಸವ ಅಭಿನಂದನಾ ಸಮಾರಂಭ, ಕಾಶಿ-ಅಭಿನಂದನಾ ಕೃತಿ ಬಿಡುಗಡೆ,ಕಾಶಿ-ನಿಧಿ ಸಮರ್ಪಣೆ ಹಾಗೂ ಕಾಸರಗೋಡು ಗೋಶಾಲೆ,ಕೇರಳ – ಕರ್ನಾಟಕ ಭವನದ ಶಿಲಾನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಜೆ ಗಂಟೆ 6.00 ರಿಂದ ಕೇರಳ – ಕರ್ನಾಟಕ ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here