ಸಚ್ಚೇರಿಪೇಟೆಯಲ್ಲಿ ಸೆ.5ರಂದು 7ನೇ ವರ್ಷದ ಸಾರ್ವಜನಿಕ ಮುದ್ದು ಕೃಷ್ಣ ಸ್ಪರ್ಧೆ

0
68

ಸಚ್ಚೇರಿಪೇಟೆ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಚ್ಚೇರಿಪೇಟೆ ಇವರ ಜಂಟಿ ಆಶ್ರಯದಲ್ಲಿ 7ನೇ ವರ್ಷದ ಸಾರ್ವಜನಿಕ ಮುದ್ದು ಕೃಷ್ಣ ಸ್ಪರ್ಧೆ ಸೆಪ್ಟೆಂಬರ್ 5ರಂದು ಬೆಳಗ್ಗೆ 10 ಗಂಟೆಗೆ ಸಚ್ಚೇರಿಪೇಟೆಯ ಲಯನ್ಸ್ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಮಕ್ಕಳ ಪ್ರತಿಭೆ ಹಾಗೂ ಕೃಷ್ಣನ ವಿವಿಧ ರೂಪಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಒಟ್ಟು 6 ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಕಂದ ಕೃಷ್ಣ, ಪುಟಾಣಿ ಕೃಷ್ಣ, ಮುದ್ದು ಕೃಷ್ಣ, ಬೆಣ್ಣೆ ಕೃಷ್ಣ, ಬಾಲ ಕೃಷ್ಣ ಹಾಗೂ ಯಶೋಧೆ ಕೃಷ್ಣ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

1 ವರ್ಷದೊಳಗಿನ ಮಕ್ಕಳಿಗೆ ಕಂದ ಕೃಷ್ಣ, 1ರಿಂದ 2 ವರ್ಷದೊಳಗಿನವರಿಗೆ ಪುಟಾಣಿ ಕೃಷ್ಣ, 2ರಿಂದ 4 ವರ್ಷದೊಳಗಿನವರಿಗೆ ಮುದ್ದು ಕೃಷ್ಣ, 4ರಿಂದ 6 ವರ್ಷದೊಳಗಿನವರಿಗೆ ಬೆಣ್ಣೆ ಕೃಷ್ಣ ಹಾಗೂ 6ರಿಂದ 8 ವರ್ಷದೊಳಗಿನ ಮಕ್ಕಳಿಗೆ ಬಾಲ ಕೃಷ್ಣ ವಿಭಾಗಗಳನ್ನು ನಿಗದಿಪಡಿಸಲಾಗಿದೆ. ಯಶೋಧೆ ಕೃಷ್ಣ ವಿಭಾಗದಲ್ಲಿ 1ರಿಂದ 8 ವರ್ಷದೊಳಗಿನ ಮಗು ತನ್ನ ತಾಯಿ ಅಥವಾ ಬೇರೆ ಮಾತೆಯೊಂದಿಗೆ ಭಾಗವಹಿಸಬಹುದಾಗಿದೆ.

ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೂ ಪ್ರಶಂಸಾ ಪತ್ರ ನೀಡಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರಲಿದೆ.

ಭಾಗವಹಿಸಲು ಇಚ್ಛಿಸುವವರು ಸೆಪ್ಟೆಂಬರ್ 2ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧಾಳುವಿನ ಜನನ ಪ್ರಮಾಣಪತ್ರದ ಪ್ರತಿಯನ್ನು ವಾಟ್ಸಪ್ ಮೂಲಕ ಕಳುಹಿಸುವಂತೆ ಆಯೋಜಕರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರನ್ನು ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಗುವುದು.
ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಮುಖ್ಯ ಶಿಕ್ಷಕರು, ಶಿಕ್ಷಕ–ರಕ್ಷಕ ಸಂಘ ಹಾಗೂ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.