8 ತಿಂಗಳ ಮಗು ಗಂಟಲಲ್ಲಿ ಸಿಲುಕಿದ್ದ ಎಲ್‌ಇಡಿ ಬಲ್ಬ್ : ಯಶಸ್ವಿಯಾಗಿ ಹೊರತೆಗೆದ ವೈದ್ಯರು..!

0
102

ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಮಗುವೊಂದು ಆಟವಾಡುವ ವೇಳೆ ಎಲ್‌ಇಡಿ ಬಲ್ಬ್ ನುಂಗಿದ ಆತಂಕಕಾರಿ ಘಟನೆ ನಡೆದಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆ ಹಾಗೂ ಚಾಕಚಕ್ಯತೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಎಲ್‌ಇಡಿ ಬಲ್ಬ್ ನುಂಗಿದ ತಕ್ಷಣ ಮಗು ವಿಪರೀತವಾಗಿ ಅಳಲಾರಂಭಿಸಿದೆ. ಮಗುವಿನ ಸ್ಥಿತಿಯನ್ನು ಗಮನಿಸಿದ ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಎಕ್ಸ್‌ರೇ ಪರೀಕ್ಷೆ ನಡೆಸಿದಾಗ ಗಂಟಲಿನಲ್ಲಿ ಲೋಹದ ವಸ್ತುವೊಂದು ಸಿಲುಕಿರುವುದು ಪತ್ತೆಯಾಯಿತು. ಬಳಿಕ ಲ್ಯಾರಿಂಗೋಸ್ಕೋಪ್ ಪರೀಕ್ಷೆ ನಡೆಸಿದಾಗ ಅದು ಎಲ್‌ಇಡಿ ಬಲ್ಬ್ ಎಂಬುದು ದೃಢಪಟ್ಟಿತು.

ಇದಾದ ಬಳಿಕ ಇಎನ್‌ಟಿ ತಜ್ಞೆ ಡಾ. ರಾಜಶ್ರೀ ಅವರ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ನಡೆಸದೇ ವಿಶೇಷ ಉಪಕರಣಗಳ ಸಹಾಯದಿಂದ ಬಲ್ಬ್ ಅನ್ನು ಯಶಸ್ವಿಯಾಗಿ ಹೊರತೆಗೆದರು. ಚಿಕಿತ್ಸೆ ಬಳಿಕ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here