ಪಿಕ್ಸೆಲ್ ಡಿಜಿಟಲ್ ಪ್ರೆಸ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

0
14

ಕಾಸರಗೋಡು: ಪಿಕ್ಸೆಲ್ ಡಿಜಿಟಲ್ ಪ್ರೆಸ್ ಕಾಸರಗೋಡು ಇದರ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾಜ ಸೇವಕ ಶ್ರೀ ಕೃಷ್ಣ ಪ್ರಸಾದ್ ಕೋಟೆಕಣಿ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಕುರಿತು ವಿವರಿಸಿದರು.

ಉದಯಕುಮಾರ್ ಮನ್ನಿಪಾಡಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಮಾಲಕರಾದ ಶ್ರೀ ಶಿನೋಜ್ ಹಾಗೂ ಶ್ರೀ ಹರಿಪ್ರಸಾದ್ ಉಪಸ್ಥಿತರಿದ್ದರು.

ವಾಣಿ ಹರಿ, ಮನೀಶ್, ಅಜಯ್, ಜಿತಾ, ಚಂದ್ರ, ಕಿರಣ್, ವಿದ್ಯಾಧರ, ಮಿಥುನ್, ಪದ್ಮಶಾಲಿನಿ, ಯೋಗೀಶ್, ಶೇಖರ್, ಅಜಿತ್, ಶೋದು, ವಿಜು, ಜಯಲಕ್ಷ್ಮಿ, ವಿಷ್ಣು, ತೇಜು ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.