ಸುರತ್ಕಲ್ : 90 ವರ್ಷದ ಸುದೀರ್ಘ ಇತಿಹಾಸ ಇರುವ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ 2026 ರ ವಾರ್ಷಿಕೋತ್ಸವವು ದಿನಾಂಕ 29.11.2026 ನೇ ಆದಿತ್ಯವಾರ ಸಾಯಂಕಾಲ 4 ಗಂಟೆಗೆ ವಿದ್ಯಾದಾಯಿನೀ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯರು ಹಾಗೂ ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರು ಶ್ರೀ ಬಿ ಇಬ್ರಾಹಿಮ್ ರವರ ಅಧ್ಯಕ್ಷತೆ ಯಲ್ಲಿ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಮುಂಬಯಿ ಮುನ್ಸಿಪಾಲ್ ಕಾರ್ಪೋರೇಷನ್ ನ ನಿವೃತ್ತ ಸಿವಿಲ್ ಇಂಜಿನಿಯರ್ ಶ್ರೀ ಲಕ್ಷ್ಮೀನಾರಾಯಣ ಹೊಸಬೆಟ್ಟು, SASMOS HET Technologies Ltd ಬೆಂಗಳೂರು ನ ಮುರಲೀಧರ ಮಯ್ಯರಪಾಡಿ, ಪುಣೆಯ ಹೊಸಬೆಟ್ಟು ಹೆವಿ ಮಷೀನರಿ ನ ಮ್ಯಾನೇಜಿಂಗ್ ಡೈರೆಕ್ಟರ್ ಎಚ್ ಮಧುಸೂದನ, ಗೀತಾ ಜ್ಞಾನ ಯಜ್ಞ ಟ್ರಸ್ಟ್ ಭಗವದ್ಗೀತೆ ಅಧ್ಯಯನ ಮತ್ತು ಸಂದೇಶ ಕೇಂದ್ರದ ಅಧ್ಯಾಪಿಕೆ ಶೈಲಶ್ರೀ ನಂದಕಿಶೋರ್ ಮತ್ತು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಸಮರ್ಥ್ ಶೆಣೈ ಬಿ ಹಾಗೂ ಹಿಂದು ವಿದ್ಯಾದಾಯಿನೀ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರಮುಖವಾಗಿ ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ, ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಅರ್ಹರಿಗೆ ಆರ್ಥಿಕ ನೆರವು, ಬಹುಮಾನ ವಿತರಣೆ ಜರಗಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆ ಗಳವರಿಂದ ವಿವಿಧ ವಿನೋದಾವಳಿ ಗಳು ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ 2001 ರ ಪ್ರಶಸ್ತಿ ಪುರಸ್ಕೃತ ಗಣೇಶಪುರ ಗಿರೀಶ ನಾವಡ ರವರ ನಿರ್ದೇಶನದಲ್ಲಿ ದಶಾವತಾರ ಯಕ್ಷಗಾನ ಬಯಲಾಟ ನಡೆಯಲ್ಲಿದ್ದು ಕಾರ್ಯಕ್ರಮದ ನಂತರ ಸಹಭೋಜನ ಜರಗಲಿದೆ. ಎಂದು ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರು ಅಡ್ವೋಕೇಟ್ ರಾಘವೇಂದ್ರ ಎಚ್ ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

