ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ : IPL 2026 ಉದ್ಘಾಟನಾ ಕಾರ್ಯಕ್ರಮ ರದ್ದು

0
15

ಬೆಂಗಳೂರು : ಹದಿನೆಂಟನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಸಂಭ್ರಮಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ನೆಲದಲ್ಲೇ ಈ ಬಾರಿ ಐಪಿಎಲ್ 2026ರ ಉದ್ಘಾಟನಾ ಪಂದ್ಯ ನಡೆಯಲಿದ್ದರೂ, ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ (BCCI) ಒಂದು ಬೇಸರದ ಸುದ್ದಿ ನೀಡಿದೆ.

ಬಹುನಿರೀಕ್ಷಿತ ಐಪಿಎಲ್ 2026ರ (IPL 19ನೇ ಆವೃತ್ತಿ) ಉದ್ಘಾಟನಾ ಸಮಾರಂಭವನ್ನು ಈ ಬಾರಿ ನಡೆಸದಿರಲು ಬಿಸಿಸಿಐ (BCCI) ನಿರ್ಧರಿಸಿದೆ. ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಮೊದಲ ಪಂದ್ಯ ನಡೆಯಲಿದ್ದರೂ, ಯಾವುದೇ ಅದ್ಧೂರಿ ಸಮಾರಂಭ ಇರುವುದಿಲ್ಲ. ಕಳೆದ ವರ್ಷ ಆರ್‌ಸಿಬಿಯ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದ ದುರಂತದ ಹಿನ್ನೆಲೆಯಲ್ಲಿ, ಮೃತರ ಗೌರವಾರ್ಥವಾಗಿ ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಕಳೆದ ವರ್ಷ (2025) ಆರ್‌ಸಿಬಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತದಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಮತ್ತು ಸಂವೇದನಾಶೀಲತೆಯ ದೃಷ್ಟಿಯಿಂದ ಈ ಬಾರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸದಿರಲು ಬಿಸಿಸಿಐ ತೀರ್ಮಾನಿಸಿದೆ.

ಉದ್ಘಾಟನಾ ಪಂದ್ಯ : ಮಾರ್ಚ್ 28, ಸಂಜೆ 7:30ಕ್ಕೆ, ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ (ಬೆಂಗಳೂರು).

ಉದ್ಘಾಟನಾ ಕಾರ್ಯಕ್ರಮ ಇಲ್ಲದಿದ್ದರೂ, ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯದ ವೇಳೆ ಸಮಾರೋಪ ಸಮಾರಂಭ ನಡೆಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ತಿಳಿಸಿದ್ದಾರೆ.

2019ರಲ್ಲೂ ಪುಲ್ವಾಮಾ ದಾಳಿಯ ಹುತಾತ್ಮ ಸೈನಿಕರ ಗೌರವಾರ್ಥವಾಗಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ, ಆ ಹಣವನ್ನು ಸೈನಿಕರ ಕುಟುಂಬಗಳಿಗೆ ನೀಡಲಾಗಿತ್ತು.

LEAVE A REPLY

Please enter your comment!
Please enter your name here