ಸುಚಿತ್ರ ಕೆ.ಎಲ್ ಇವರಿಗೆ ಡಾಕ್ಟರೇಟ್

0
20

ಮುಡಿಪು : ‘ನೇಮಿಚಂದ್ರ ಅವರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ನೆಲೆಗಳು’ ಎಂಬ ವಿಷಯದಲ್ಲಿ ಸುಚಿತ್ರ ಕೆ.ಎಲ್ ಇವರು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಪಿಎಚ್ ಡಿ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.

ಇವರು ಮೂಲತ: ಸೋಮವಾರ ಪೇಟೆ ತಾಲೂಕಿನ ಖ್ಯಾತೆಗ್ರಾಮದವರು. ಲೋಕೇಶ್ , ಲೀಲಾವತಿ ದಂಪತಿ ಪುತ್ರಿಯಾಗಿರುವ ಇವರು ಸಚಿನ್ ಕುಮಾರ್ ಬಿ.ಕೆ ಇವರ ಪತ್ನಿ. ಪ್ರಸ್ತುತ ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here