ಮಂಗಳೂರು : 2025 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ತಿಲಕ್ ರಾಜ್ ಆಯ್ಕೆ

0
71

ಮಂಗಳೂರು : 2025 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎ.ಆರ್.ಎಸ್.ಐ ಅಗಿರುವ ತಿಲಕ್ ರಾಜ್ ಆಯ್ಕೆಯಾಗಿದ್ದಾರೆ.

ಮಂಗಳೂರು ತಾಲೂಕಿನ ಕಾವೂರು ಗ್ರಾಮದ ದಯಾನಂದ ಪೂಜಾರಿ ಮತ್ತು ವೇದಾವತಿ ದಂಪತಿಗಳ ಪುತ್ರರಾದ ತಿಲಕ್ ರಾಜ್ ಇವರು 2008 ರಲ್ಲಿ ಜಿಲ್ಲಾ ಪೊಲೀಸ್ ಡಿ.ಎ.ಆರ್ ಘಟಕಕ್ಕೆ ಸೇರ್ಪಡೆಯಾಗಿ ವಿವಿಧ ವಿಭಾಗಗಳಲ್ಲಿ ಒಟ್ಟು 18 ವರ್ಷ ಕರ್ತವ್ಯ ನಿರ್ವಹಿಸಿರುವುದಲ್ಲದೆ, ಇವರು ಭಯೋತ್ಪಾದನಾ ನಿಗ್ರಹ ದಳ ಕೂಡ್ಲು ಬೆಂಗಳೂರಿನಲ್ಲಿ ನಡೆಸುವ ಕೌಂಟರ್ ಟೆರರಿಸಂ ಕೋರ್ಸನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಈ ಮೊದಲು ಇವರು ನಿರ್ವಹಿಸಿದ ಅತ್ಯುತ್ತಮ ಸೇವೆಗಾಗಿ 2024 ನೇ ಸಾಲಿನಲ್ಲಿ ಮಾನ್ಯ ಡಿಜಿ & ಐಜಿಪಿ, ಕರ್ನಾಟಕ ರಾಜ್ಯರವರ ಪ್ರಶಂಸನಾ ಪದಕಕ್ಕೂ ಭಾಜನರಾಗಿರುವ ಇವರಿಗೆ ಇದೀಗ 2025 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರ ಒಲಿದು ಬಂದಿದೆ.

ಇವರ ಪತ್ನಿ ಸತ್ಯವತಿ ರವರು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಇಲಾಖೆ ಮಂಗಳೂರು ವಿಭಾಗ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here