ಆದಿಚುಂಚನಗಿರಿ ಮಠಾಧೀಶರಾದ ಪರಮಾಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀ ರಾಮ ನವಮಿಯ ಪರ್ವ ಸಂದರ್ಭದಲ್ಲಿ ಪೂಜ್ಯ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಮೆಲ್ಬೋರ್ನ್ ಮಹಾನಗರದಲ್ಲಿರುವ ಶ್ರೀಪುತ್ತಿಗೆ ಮಠಕ್ಕೆ ಭೇಟಿ ನೀಡಿದರು.
ಪೂಜ್ಯರನ್ನು ಪೂರ್ಣ ಕುಂಭ ಸ್ವಾಗತದೊಡನೆ ಬರಮಾಡಿಕೊಳ್ಳಲಾಗಿ ಗೌರವಿಸಲಾಯಿತು.ನೆರೆದಿದ್ದ ಭಕ್ತರನ್ನು ಶ್ರೀಗಳವರು ಆಶೀರ್ವದಿಸಿ ಪುತ್ತಿಗೆ ಶ್ರೀಪಾದರ ವಿಶ್ವವ್ಯಾಪಿ ಧರ್ಮ ಪ್ರಸಾರ ಕಾರ್ಯಕ್ರಮವನ್ನು ಮೆಚ್ಚಿಕೊಂಡರು.

