ಮೂಡಬಿದಿರೆ : ಜಿಲ್ಲೆಯಾದ್ಯಂತ ಕ್ರೈಸ್ತರು ಪವಿತ್ರ ಸಪ್ತಾಹವನ್ನು ಭಕ್ತಿಯಿಂದ ಬರಮಾಡಿಕೊಂಡಿದ್ದು ಪಾಲಡ್ಕ ಧರ್ಮಕ್ಷೇತ್ರದಲ್ಲಿ ಗರಿಗಳ ಹಬ್ಬವನ್ನು ಮಾ.29ರಂದು ಭಕ್ತಿಯಿಂದ ಆಚರಿಸಲಾಯಿತು. ಚರ್ಚ್‌ನೆ ಧರ್ಮಗುರುಗಳಾದ ವಂ.ಫಾ. ಎಲಿಯಾಸ್ ಡಿಸೋಜ, ವಂ.ಫಾ. ಮೇಕ್ಸಿಂ ಪಿಂಟೋ ಅವರ ನೇತ್ರತ್ರದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಗರಿಗಳ ಹಬ್ಬ ಆಚರಿಸಲಾಯಿತು.

ಯೇಸುಕ್ರಿಸ್ತರಿಗೆ ಜೆರುಸಲೇಂಗೆ ಸಿಕ್ಕ ಸ್ವಾಗತವನ್ನು ಸ್ಮರಿಸಿಕೊಂಡು ಗರಿಗಳ ರವಿವಾರ ಆಚರಿಸುತ್ತಾರೆ. ರವಿವಾರ ಬೆಳಗ್ಗೆ ಚರ್ಚ್‌ನಲ್ಲಿ ಕ್ರೈಸ್ತರು ವಿಶಿಷ್ಟ ವಿಧಾನವನ್ನು ನೆರವೇರಿಸಿದರು. ಚರ್ಚ್ ವಠಾರದಲ್ಲಿ ಜತೆಯಾದ ಕ್ರೈಸ್ತರಿಗೆ ತೆಂಗಿನ ಗರಿಗಳನ್ನು ಹಂಚಲಾಯಿತು.
ಬಳಿಕ ಧರ್ಮಗುರುಗಳು ಪ್ರಾರ್ಥನಾ ವಿಧಿ ನೆರವೇರಿಸಿ ಗರಿಗಳನ್ನು ಆಶೀರ್ವಚಿಸಿದರು. ಬೈಬಲ್ ವಾಚನ ನಡೆಯಿತು. ಅಲ್ಲಿಂದ ಧರ್ಮಗುರುಗಳು ಸಹಿತ ಗರಿಗಳನ್ನು ಹಿಡಿದುಕೊಂಡು ಕ್ರಿಸ್ತರಿಗೆ ಜಯಕಾರ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.

