ದಾವಣಗೆರೆ : ದಾವಣಗೆರೆಯ ಶ್ರೀ ಭೀಮಾಂಬಿಕಾ ವಿದ್ಯಾಸಂಸ್ಥೆಯಿಂದ ಈಗಾಗಲೇ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳ ಮಕ್ಕಳ ಪರೀಕ್ಷೆಗಳು ಮುಗಿದಿರುತ್ತದೆ ಬೇಸಿಗೆ ರಜಾ ಪ್ರಯುಕ್ತ ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಗಳನ್ನು ಕಲ್ಪಿಸುವ ಸದುದ್ದೇಶದಿಂದ ಈ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಏಪ್ರಿಲ್ 10 ರಿಂದ ಮೇ.28ರ ವರೆಗೆ ಈ ಶಿಬಿರ ದಾವಣಗೆರೆ ಹದಡಿ ರಸ್ತೆಯಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಹತ್ತಿರವಿರುವ ಶ್ರೀ ಸೋಮೇಶ್ವರ ವಿದ್ಯಾಲಯದ ಸಭಾಂಗಣದಲ್ಲಿ ನಡೆಯುತ್ತಿದೆ ಎಂದು ಶ್ರೀ ಭೀಮಾಂಬಿಕಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಹೆಚ್. ಭೀಮೇಶ್ವರ ತಿಳಿಸಿದ್ದಾರೆ.
4ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಅಂತರಾಷ್ಟಿçÃಯ ವೈದಿಕ ಗಣಿತ, ವಿಮಾನ ವಿನ್ಯಾಸ, ಡ್ರೋನ್ ತಂತ್ರಜ್ಞಾನ ಮತ್ತು ಕೋಡಿಂಗ್, ಕಲೆ, ನಾಟಕ, ಚಿತ್ರಕಲೆ ವಿನ್ಯಾಸ, ಜೀವನದ ಕೌಶಲ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ನಾಡಿನ ಖ್ಯಾತ ತಜ್ಞರು, ಹಿರಿಯ ಅನುಭವಿಗಳು ಶಿಬಿರ ನಡೆಸಿಕೊಡುತ್ತಿದ್ದಾರೆ.
ದಿನಾಂಕ 31-3-2026ರೊಳಗೆ ಈ ಮಹತ್ವಪೂರ್ಣ ಶಿಬಿರಕ್ಕೆ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9845294826 ಈ ಸನೀಹವಾಣಿಗೆ ಸಂಪರ್ಕಿಸಬಹುದು. ಮಕ್ಕಳ ಪರಿಜ್ಞಾನ ಹೆಚ್ಚಿಸಲು ಮುಂದಿನ ಸಾಧನೆಗಳಿಗೆ ನಾಂದಿ ಹಾಡಲು ಸಂಸ್ಥೆಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

