ಕಡಂದಲೆ ವಿದ್ಯಾಗಿರಿ ಆಟೋ ಪಾರ್ಕ್‌ಗೆ ಇಂಟರ್‌ಲಾಕ್ ಅಳವಡಿಸಲು ಗುದ್ದಲಿ ಪೂಜೆ

0
127


ಕಡಂದಲೆ: ಕಡಂದಲೆ ವಿದ್ಯಾಗಿರಿ ಬಿಟಿ ರಸ್ತೆಯಲ್ಲಿರುವ ಆಟೋ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಜೆಸಿಐ ಮುಂಡ್ಕೂರು ಭಾರ್ಗವ ಘಟಕಕ್ಕೆ ಜೆಸಿಐ ವಲಯ 15ರ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಶಾಶ್ವತ ಯೋಜನೆಯೊಂದನ್ನು ಉದ್ಘಾಟಿಸುವ ಉದ್ದೇಶದಿಂದ ಆಟೋ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಯನ್ನು ಘಟಕದ ವತಿಯಿಂದ ಆರಂಭಿಸಲಾಗಿದೆ.
ಈ ಕಾಮಗಾರಿಗೆ ಸುಬ್ರಹ್ಮಣ್ಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಮೋಹನ್‌ದಾಸ್ ದೇವಾಡಿಗ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಮೂಲಕ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಆಟೋ ತಂಗುದಾಣ ನಿರ್ಮಾಣಕ್ಕೆ ಚಾಲನೆ ದೊರೆತಿದೆ.