ಬೆಂಗಳೂರು : ಸಾಹಿತ್ಯ–ಸಮಾಜ ಸೇವೆಯ ಸಾಧಕ ಪುತ್ತೂರು ಉಮೇಶ್ ನಾಯಕ್ ಅವರಿಗೆ ‘ಸುವರ್ಣ ಕನ್ನಡಿಗ 2026’ ಪ್ರಶಸ್ತಿ ಪ್ರಧಾನ

0
44

ಪುತ್ತೂರು,ಸಮಾಜಸೇವೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಪುತ್ತೂರು ಉಮೇಶ್ ನಾಯಕ್ ಅವರಿಗೆ ಪ್ರತಿಷ್ಠಿತ ಏಷ್ಯಾ ನೆಟ್ ಸುವರ್ಣ ಟಿವಿ ಹಾಗೂ ಕನ್ನಡ ಪ್ರಭ ‘ಸುವರ್ಣ ಕನ್ನಡಿಗ 2026’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಉದ್ಯಮಗಳ ಇಲಾಖೆಯ ಸಚಿವರಾದ ಎಚ್ ಕೆ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರಾದ ಅನಿರುದ್ಧ ಹಾಗೂ ಏಷ್ಯಾ ನೆಟ್ ಸುವರ್ಣ ಟಿವಿಯ ಹಾಗೂ ಕನ್ನಡಪ್ರಭ ಇದರ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ ಇವರು ಪ್ರಶಸ್ತಿ ಪ್ರಧಾನ ಮಾಡಿದರು.

ಈ ಸಮಾರಂಭವು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಪುತ್ತೂರು ಉಮೇಶ್ ನಾಯಕ್ ಅವರ ಸಾಧನೆಗೆ ಮಾತ್ರವಲ್ಲದೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೆ ಮತ್ತೊಂದು ಗರಿಮೆಯ ಮೈಲುಗಲ್ಲಾಗಲಿದೆ ಜೊತೆಗೆ ರಾಜ್ಯದಲ್ಲೇ ಗುರುತಿಸುವಂತಾಗಲಿದೆ.

ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಪುತ್ತೂರು ಉಮೇಶ್ ನಾಯಕ್ ಅವರು ಈ ‘ಸುವರ್ಣ ಕನ್ನಡಿಗ’ ಪ್ರಶಸ್ತಿಯನ್ನು ಪುತ್ತೂರಿನ ಸಾಹಿತಿಗಳು ಹಾಗೂ ಸಾಹಿತ್ಯ ಸೇವಕರಿಗೆ ಹಾಗೂ ಸಹೋದರ ಸುರೇಶ್ ನಾಯಕ್ ಅರ್ಪಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here