ಮೈಸೂರು : ಒಣಗಿದ ದಾಸವಾಳ ನುಂಗಿ 6 ತಿಂಗಳ ಮಗು ಮೃತ

0
98

ಮೈಸೂರು : ಈ ಘಟನೆ ಪ್ರತಿಯೊಬ್ಬ ಪೋಷಕರ ಎದೆಯನ್ನು ಝಲ್ಲೆನ್ನಿಸುವಂತಿದೆ. ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ಅಕಸ್ಮಾತ್ ಆಗಿ ನೆಲದಲ್ಲಿದ್ದ ಒಣಗಿದ ದಾಸವಾಳದ ಎಸಳನ್ನು ಬಾಯಿಗೆ ಹಾಕಿಕೊಂಡಿದೆ. ಆ ಪುಟ್ಟ ಎಸಳು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದೇ ಅನಾಹುತಕ್ಕೆ ಕಾರಣವಾಯಿತು.

ಆಟದ ಭರದಲ್ಲಿ ಮಗು ಹೂವನ್ನು ನುಂಗಲು ಪ್ರಯತ್ನಿಸಿದಾಗ, ಅದು ಉಸಿರಾಟದ ನಾಳಕ್ಕೆ ಅಡ್ಡಿಯಾಗಿದೆ. ಮಗು ಉಸಿರಾಡಲು ಕಷ್ಟಪಡುತ್ತಿರುವುದನ್ನು ಗಮನಿಸಿದ ಪೋಷಕರು ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ಪುಟ್ಟ ಜೀವ ಇಹಲೋಕ ತ್ಯಜಿಸಿದೆ.

LEAVE A REPLY

Please enter your comment!
Please enter your name here