ಬೈಪಾಸ್ ರಸ್ತೆಯ ಅಪಾಯಕಾರಿ ಚರಂಡಿಗೆ ತಡೆಗೋಡೆ ನಿರ್ಮಿಸುವಂತೆ ಕ.ರ.ವೇ.ಶಿವರಾಮೆಗೌಡರ ಬಣ ಆಗ್ರಹ

0
7

ಕುಶಾಲನಗರ: ಬೈಪಾಸ್ ರಸ್ತೆಯಲ್ಲಿ ಬಹು ವರ್ಷಗಳಿಂದ ಕಾಮಗಾರಿ ಅಪೂರ್ಣ ಹಂತದಲ್ಲಿರುವ ಚರಂಡಿ ದೇವರಾಜ ಅರಸು ಬಾಲಕರ ವಸತಿ ನಿಲಯದ ಪಕ್ಕದಲ್ಲಿದ್ದು ಕೊಳಚೆನೀರು ತುಂಬಿಕೊಂಡು ಗಬ್ಬುನಾರುತ್ತಿದ್ದು ಹಾಗೂ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ರಸ್ತೆಬದಿಯ ಅಪಾಯಕಾರಿ ಹೊಂಡದಿಂದ ಮಕ್ಕಳು ಹಾಗೂ ವಾಹನ ಪ್ರಯಾಣಿಕರಿಗೆ ಮೃತ್ಯುಕೂಪದಂತಿದ್ದು
ಮಣ್ಣು ಕುಸಿದು ಬಿರುಕು ಬಿಟ್ಟಿದೆ. ಬಾರಿ ವಾಹನಗಳ ಸಂಚಾರವಾಗಿರುವ ಈ ರಸ್ತೆಯಲ್ಲಿ ವಾಹನಗಳು ಆಯತಪ್ಪಿ, ಚರಂಡಿಗೆ ಬೀಳುವ ಸಂಭವ ಹೆಚ್ಚಿದ್ದು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಈ ಚರಂಡಿಯನ್ನು ದುರಸ್ತಿಗೊಳಿಸಿ ಸೂಕ್ತ ತಡೆಗೋಡೆಯನ್ನು ನಿರ್ಮಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೆಚ್ ಶಿವರಾಮೇಗೌಡರ ಬಣ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಕೆ.ಚಂದ್ರು ಮಡಿಕೇರಿ ವಿಧಾನಸಭೆ ಕ್ಷೇತ್ರ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ಸತೀಶ್ ಎಂ ,ಎಸ್.ಪುಟ್ಟಮ್ಮ ಕುಶಾಲನಗರ ತಾಲೂಕು ಗೌರವಾಧ್ಯಕ್ಷೆ, ಪುಟ್ಟಸ್ವಾಮಿ ತಾಲೂಕು ಅಧ್ಯಕ್ಷರು, ರಂಗಸ್ವಾಮಿ ಉಪಾಧ್ಯಕ್ಷರು ರಾಜೇಗೌಡರು ತಾಲೂಕು ಕಾರ್ಯದರ್ಶಿ ,ಪ್ರೇಮ ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ತಿಕ್ ,ಮೀನಾಕ್ಷಿ ಮುಂತಾದ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ